ಜಿಲ್ಲೆ

ಥೀಮ್ ಪಾರ್ಕ್ ಮರೆತ ಅಮಿತ್ ಶಾ

Davangere - Desk - Mahesh Babu E

ಹೊಸದುರ್ಗ: ಕಳೆದ ಲೋಕಸಭಾ ಚುನಾವಣೆ ವೇಳೆ ಚಿತ್ರದುರ್ಗಕ್ಕೆ ಆಗಮಿಸಿದ್ದ ಕೇಂದ್ರ ಗೃಹಸಚಿವ ಅಮಿತ್ ಶಾ, ಕೋಟೆನಾಡು ಕೇಂದ್ರ ಸ್ಥಳದಲ್ಲಿ ಮದಕರಿ ನಾಯಕ ಥೀಮ್ ಪಾರ್ಕ್ ನಿರ್ಮಿಸುವುದಾಗಿ ಹೇಳಿದ್ದರು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.

ತಾಲೂಕು ವಾಲ್ಮೀಕಿ ನಾಯಕ ಸಮಾಜ ಹಾಗೂ ನೌಕರರ ಸಾಂಸ್ಕೃತಿಕ ಸಂಘ ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಆ ಸಂದರ್ಭ ಸಮುದಾಯದ ಮತವನ್ನು ಪಡೆದು, ಚಿತ್ರದುರ್ಗ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಆದರೆ, ಇಲ್ಲಿಯವರೆಗೂ ತಾವು ಕೊಟ್ಟ ಭರವಸೆ ಈಡೇರಿಸುವ ಸಣ್ಣ ಪ್ರಯತ್ನ ಮಾಡಿಲ್ಲ. ಈಗಾಲದರೂ ಈ ಕುರಿತು ಗಂಭಿರವಾಗಿ ಚಿಂತಿಸಬೇಕು ಎಂದು ಆಗ್ರಹಿಸಿದರು.