ಜಿಲ್ಲೆ

ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ

Bagalkot

ಅಮೀನಗಡ: ಸರ್ಕಾರದಿಂದ ನಡೆಯುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಹಾಗೂ ಅವುಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕೆಂದು ಶಾಸಕ ಡಾ.ವೀರಣ್ಣ ಚರಂತಿಮಠ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ಹೂವಿನಹಳ್ಳಿ, ರಾಮಥಾಳ, ಐಹೊಳೆ, ಇನಾಂಬೂದಿಹಾಳ ಗ್ರಾಮದಲ್ಲಿ ರಸ್ತೆ ದುರಸ್ತಿ, ಬೇವಿನಾಳ, ಹಿರೇಮಾಗಿ ಹಾಗೂ ಸುರಳಿಕಲ್ಲನಲ್ಲಿ ಅಂದಾಜು 4.53 ಕೋಟಿ. ರೂ. ಸಮುದಾಯ ಭವನ ಸೇರಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಪಟ್ಟಣದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ, ಸಂಗಮೇಶ್ವರ ವಿದ್ಯಾವರ್ಧಕ ಸಂಘದಲ್ಲಿ 30 ಲಕ್ಷ ರೂ.ವೆಚ್ಚದ ಶಾಲೆಗಳ ಹೆಚ್ಚುವರಿ ಕೊಠಡಿ, ಬಣ್ಣದ ಮನೆ ಶಾಲೆ, ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಸೇರಿ ಹಲವು ಕಡೆ ಭೂಮಿಪೂಜೆ ನೆರವೇರಿಸಿದರು. ಪಪಂ ವತಿಯಿಂದ 5.12 ಲಕ್ಷ ರೂ. ವೆಚ್ಚದಲ್ಲಿ 27 ಲಾನುಭವಿಗಳಿಗೆ ಸೋಲಾರ್ ಗೀಜರ್ ಹಾಗೂ 30 ಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿದರು.

ಪ್ರಭುಶಂಕರೇಶ್ವರ ಮಠದ ಶಂಕರರಾಜೇಂದ್ರ ಸ್ವಾಮೀಜಿ, ಪಪಂ ಅಧ್ಯಕ್ಷ ಸಂಗಪ್ಪ ತಳವಾರ, ಉಪಾಧ್ಯಕ್ಷೆ ಶಂಕ್ರಮ್ಮ ಗೌಡರ, ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಬಿಇಒ ಮಹಾದೇವ ಬೆಳ್ಳೆಣ್ಣವರ, ಶಿಕ್ಷಣ ಸಂಯೋಜಕ ವಿ.ಬಿ. ಮಠ, ಪಪಂ ಸದಸ್ಯರಾದ ವಿಜಯಕುಮಾರ ಕನ್ನೂರ, ಗುರುನಾಥ ಚಳ್ಳಮರದ, ಶೇಖಪ್ಪ ಲಮಾಣಿ, ಶಾಂತವ್ವ ಯಂಕಂಚಿ, ಸೋನಾಬಾಯಿ ಲಮಾಣಿ, ಬಿಜೆಪಿ ಮುಖಂಡರಾದ ಮಲ್ಲೇಶ ಬಿಜಾಪುರ, ಶಿವಕುಮಾರ ಕನ್ನೂರ, ಶಂಕ್ರಯ್ಯ ರೇವಣಕಿಮಠ, ಪರಶುರಾಮ ಪುರ್ತಗೇರಿ, ಪಪಂ ಸಿಬ್ಬಂದಿ ಸಂತೋಷ ವ್ಯಾಪಾರಿಮಠ, ನಿರ್ಮಿತಿ ಕೇಂದ್ರದ ಶಂಕರಲಿಂಗ ಗೂಗಿ, ಅಜ್ಮೀರ್ ಮುಲ್ಲಾ, ಡಿ.ಪಿ. ಅತ್ತಾರ್, ರಾಮಣ್ಣ ಬ್ಯಾಕೋಡ, ಯಮನೂರ ಕತ್ತಿ ಸೇರಿ ಮತ್ತಿತರರು ಇದ್ದರು.