ಅಮೀನಗಡ: ಸರ್ಕಾರ ನಿರ್ಲಕ್ಷೃ ಧೋರಣೆ ಖಂಡಿಸಿ ರಾಜ್ಯ ಛಾಯಾಚಿತ್ರ ಗ್ರಾಹಕರ ಸಂಘದ ಅಮೀನಗಡ ಶಾಖೆ ವತಿಯಿಂದ ಸ್ಟುಡಿಯೋ ಬಂದ್ ಮಾಡಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಸಂಘದ ಗೋವಿಂದ ಕುಲಕರ್ಣಿ ಮಾತನಾಡಿ, ಲಾಕ್‌ಡೌನ್‌ನಿಂದಾಗಿ ಛಾಯಾಗ್ರಾಹಕರ ಬದುಕು ತೀವ್ರ ತೊಂದರೆಗೆ ಸಿಲುಕಿದೆ. ಕರೊನಾ ಕರಿನೆರಳಿನಿಂದಾಗಿ ಮದುವೆ ಸೇರಿ ಹಲವು ಕಾರ್ಯಕ್ರಮಗಳ ಮೇಲೆ ಸರಳತೆಯ ನಿರ್ಬಂಧ ಹೇರುವ ಮೂಲಕ ಛಾಯಾಗ್ರಾಹಕರ ಬದುಕಿಗೆ ತೀವ್ರ ಹೊಡೆತ ಬಿದ್ದಿದೆ ಎಂದು ತಿಳಿಸಿದರು.
ಬಹುತೇಕ ಸಮಾರಂಭಗಳು ಮೊಬೈಲ್‌ಗಳ ಮೂಲಕವೇ ನಡೆದಿದ್ದರಿಂದ ನಮ್ಮ ಬದುಕು ಸಾಕಷ್ಟು ತೊಂದರೆಗೆ ಸಿಲುಕಿದೆ. ಉದ್ಯೋಗವೇ ನಿಂತು ಹೋದಂತಾಗಿದೆ. ಜತೆಗೆ ಸರ್ಕಾರದ ಹಲವು ನಿರ್ಧಾರಗಳಿಂದ ಸಂಕಷ್ಟ ಅನುಭವಿಸುವಂತಾಗಿದ್ದು, ಕೂಡಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.
ಹಸನ್ ನಾಗೂರ, ಎಂ.ವೈ.ಬಡಿಗೇರ, ಪ್ರಭು ಹಣಗಿ, ಶೇಖಪ್ಪ ಶಾಂತಗೇರಿ, ಸಂಗಮೇಶ ಬೇವೂರ, ರಾವಸಾಹೇಬ ಗರಡಿ, ಚಿದಾನಂದ ಮಳ್ಳಿ, ಈಶಪ್ಪ ಮುಷಿಗೇರಿ, ನೂರಂದಪ್ಪ ರಂಜಣಗಿ, ರಾಜು ಗರಡಿ ಇತರರು ಇದ್ದರು.