ಜಿಲ್ಲೆ

ಅಮರಗೋಳದಲ್ಲಿ ಸಾಂಸ್ಕೃತಿಕ ಹಬ್ಬ, ಅನ್ನಸಂತರ್ಪಣೆ

Dharwada - Basavaraj Idli

ಹುಬ್ಬಳ್ಳಿ: ತಾಲೂಕಿನ ಅಮರಗೋಳ ಗ್ರಾಮದ ನಾರಾಯಣಪುರ ಓಣಿಯಲ್ಲಿ ಶ್ರೀ ಸಿದ್ದೇಶ್ವರ ಯುವಕ ಮಂಡಳಿ ವತಿಯಿಂದ 12ನೇ ವರ್ಷದ ಸಾರ್ವಜನಿಕ ಗಣೇಶ ಉತ್ಸವ ಸಂಭ್ರಮದಿಂದ ನಡೆಯುತ್ತಿದೆ. ಮಹಾಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ನಿತ್ಯ ಸಂಜೆ ಮಹಾಪೂಜೆ ನಡೆಯುತ್ತಿದೆ.

ಸೆ. 9ರಂದು ಮಹಾಪೂಜೆ ಹಾಗೂ ಮಧ್ಯಾಹ್ನ ಉತ್ತರ ಕರ್ನಾಟಕ ಶೈಲಿಯ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ. ವಿಶೇಷವಾಗಿ ರೊಟ್ಟಿ, ಚಪಾತಿ, ಎಣ್ಣೆಗಾಯಿ ಪಲ್ಯ, ಎಣ್ಣೆ ಕಾರಾ, ಸುರುಳಿ ಹೋಳಿಗೆ, ಬಾಳೆಹಣ್ಣಿನ ಸಿಹಿ ಪದಾರ್ಥ ಸೇರಿ ಹಲವು ಖಾದ್ಯಗಳು ಪ್ರಸಾದದಲ್ಲಿ ಇರಲಿವೆ.

ಸಂಜೆ 7ಕ್ಕೆ ಖಾಸಗಿ ವಾಹಿನಿಯ ಖ್ಯಾತ ಕಲಾವಿದರಿಂದ ರಸಮಂಜರಿ, ಜಾನಪದ ಗಾರುಡಿಗ ಇಮಾಮಸಾಬ ವಲ್ಲೆಪ್ಪನವರ ಅವರಿಂದ ಜಾನಪದ ಹಾಗೂ ಹಾಸ್ಯ ಪದಗಳ ಕಾರ್ಯಕ್ರಮ ನಡೆಯಲಿದೆ. ಶಾಲೆ ಮಕ್ಕಳಿಂದ ಮನೋರಂಜನೆ ಕಾರ್ಯಕ್ರಮ ನಡೆಯಲಿದೆ.

ಸೆ. 15ರಂದು ಮಧ್ಯಾಹ್ನ 3ಕ್ಕೆ ರಾಜ್ಯದ ಪ್ರಸಿದ್ಧ ಸಾಂಸ್ಕೃತಿಕ ಕಲಾ ತಂಡಗಳ ಸಹಯೋಗದೊಂದಿಗೆ ಗ್ರಾಮದಲ್ಲಿ ಗಣಪತಿ ಮೂರ್ತಿ ಮೆರವಣಿಗೆ ಮಾಡಿ ನಂತರ ವಿಸರ್ಜನೆ ಮಾಡಲಾಗುವುದು. ಚಂಡೆಮೇಳ, ಗೊಂಬೆ ಉತ್ಸವ ಕಲಾ ತಂಡಗಳು ಭಾಗವಹಿಸಲಿವೆ.