ಗಂಗಾವತಿ: ಮುಂಬರುವ ಆರ್ಥಿಕ ಸಾಲಿನ ನರೇಗಾ ಕ್ರೀಯಾಯೋಜನೆಯನ್ನು ತತ್ರಾಂಶದ ಮೂಲಕ ನೋಂದಾಯಿಸಬೇಕಿದ್ದು, ತತ್ರಾಂಶ ಬಳಕೆ ಕುರಿತು ಕಾರ್ಯಾಗಾರದ ಮೂಲಕ ಮಾಹಿತಿ ನೀಡಲಾಗುತ್ತಿದೆ ಎಂದು ಜಿಪಂ ಸಂಪನ್ಮೂಲ ವ್ಯಕ್ತಿ ಮತ್ತು ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಮಹಾಂತಸ್ವಾಮಿ ಹೇಳಿದರು.
ನಗರದ ತಾಪಂ ಮಂಥನ ಸಭಾಂಗಣದಲ್ಲಿ ಗಂಗಾವತಿ, ಕಾರಟಗಿ, ಕನಕಗಿರಿ ತಾಲೂಕಿನ ಗ್ರಾಪಂ ಅಧಿಕಾರಿಗಳು, ಸಿಬ್ಬಂದಿಗೆ ನರೇಗಾ ಕಾರ್ಮಿಕ ಆಯ-ವ್ಯಯ ತಯಾರಿಕೆ ಕುರಿತು ಶನಿವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ನರೇಗಾ ಕ್ರಿಯಾಯೋಜನೆ ಮಾಡೆಲ್ ಸ್‌ಟಾವೇರ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದ್ದು, ಎಎಂಸಿ (ಪ್ರಧಾನ ವಾರ್ಷಿಕ ನರೇಗಾ ಸುತ್ತೋಲೆ) ಪ್ರಕಾರ ಕಾಮಗಾರಿ ಆಯ್ಕೆ ಮಾಡಬೇಕು. ನರೇಗಾ ಸಿಬ್ಬಂದಿ, ಅನುಮೋದಿಸಿದ ಕಾಮಗಾರಿಗಳ ಕ್ಷೇತ್ರ ಭೇಟಿ ಮಾಡಿ ಪರಿಶೀಲಿಸಬೇಕು. ಅಂದಾಜು ಪತ್ರಿಕೆ ತಯಾರಿಸಿ, ಕ್ರಿಯಾಯೋಜನೆ ಸಿದ್ಧಪಡಿಸಿ ತಾಪಂ ಕಾರ್ಯಾಲಯಕ್ಕೆ ತತ್ರಾಂಶ ಮೂಲಕ ಮಾಹಿತಿ ಸಲ್ಲಿಸಬೇಕು. ವೈಯಕ್ತಿಕ ಮತ್ತು ಸಾಮುದಾಯಿಕ ಕಾಮಗಾರಿಗಳನ್ನು ಕ್ಯೂಆರ್ ಕೋಡ್ ಮೂಲಕ ಲಾನುಭವಿಗಳು ಬೇಡಿಕೆ ಸಲ್ಲಿಸಲು ಅವಕಾಶವಿದೆ. ಹಳ್ಳಿಗಳಲ್ಲಿ ಉದ್ಯೋಗ ಖಾತರಿ ನಡಿಗೆ, ಸಬಲತೆಯಡೆಗೆ ಅಭಿಯಾನದಡಿ ಪ್ರಚಾರ ಕೈಗೊಳ್ಳಿ ಎಂದರು.
ಎ್ಇಸಿ ಸಂಸ್ಥೆ ಜಿಲ್ಲಾ ಸಂಯೋಜಕ ವಾಸುದೇವ ಮೂರ್ತಿ ಮಾತನಾಡಿ, ನೈಸರ್ಗಿಕ ಸಂಪನ್ಮೂಲ ಸಂರಕ್ಷಣಾ ಕಾಮಗಾರಿ ಕೈಗೆತ್ತಿಕೊಳ್ಳುವಾಗ ಸ್ಥಳದ ಸೂಕ್ತತೆಗೆ ಕ್ಲಾರ್ಟ್ ಆ್ಯಪ್ (ಕಾಂಪೋಸಿಟ್ ಲ್ಯಾಂಡ್ ಸ್ಕೇಪ್ ಟೂಲ್) ಬಳಕೆಗೆ ಆದ್ಯತೆ ನೀಡಬೇಕಿದೆ. ಗ್ರಾಮ ಪರಿಸರ ಅಭಿವದ್ಧಿ ಮತ್ತು ನಿರ್ವಹಣೆ ಸಮಿತಿಗಳ ರಚನೆ ಮೂಲಕ ಪರಿಸರ ಸಂರಕ್ಷಣೆ ಕೈಗೊಳ್ಳಿ ಎಂದರು.
ಮಾಡೆಲ್ ಸ್‌ಟಾವೇರ್‌ನಲ್ಲಿ ಮಾಹಿತಿ ಅಳವಡಿಸುವ ಬಗ್ಗೆ ಎಂಎಎಸ್ ಸಂಯೋಜಕ ಚನ್ನಬಸವ ಮಾಹಿತಿ ನೀಡಿದರು. ತಾಪಂ ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ್,ಯೋಜನಾಧಿಕಾರಿ ಗುರುಪ್ರಸಾದ ಸೇರಿ ತಾಲೂಕು ಮಟ್ಟದ ಅನುಷ್ಠಾನ ಅಧಿಕಾರಿಗಳು, ತ್ರಿವಳಿ ತಾಲೂಕಿನ ಪಿಡಿಒ, ನರೇಗಾ ಸಿಬ್ಬಂದಿ, ತಾಂತ್ರಿಕ ಸಹಾಯಕರು, ಡಿಇಓಗಳು, ಬಿಎ್ಟಿ ಗ್ರಾಮ ಕಾಯಕ ಮಿತ್ರರಿದ್ದರು.