ಜಿಲ್ಲೆ

ಕಾಡಂಚಿನ ಗ್ರಾಮಗಳಲ್ಲಿ ಆಂಬುಲೆನ್ಸ್ ಸೇವೆ ಕಾರ್ಯಾರಂಭ

ರಾಜಣ್ಣ

ಗುಂಡ್ಲುಪೇಟೆ: ತಾಲೂಕಿನ ಕಾಡಂಚಿನ ಗ್ರಾಮಗಳ ಜನರ ಆರೋಗ್ಯ ಸೇವೆಗೆ ಬಂಡೀಪುರ ಹುಲಿ ಸಂರಕ್ಷಣಾ ಪ್ರತಿಷ್ಠಾನ ನಿಧಿಯಡಿ ಅರಣ್ಯ ಇಲಾಖೆ ಎರಡು ಆಂಬುಲೆನ್ಸ್ ನೀಡಿದ್ದು ಭಾನುವಾರದಿಂದ ಕಾರ್ಯಾರಂಭ ಮಾಡಿವೆ.


ಒಂದು ವಾಹನವು ಬಂಡೀಪುರ ಸಮೀಪದ ಮಂಗಲ, ಜಕ್ಕಹಳ್ಳಿ, ಯಲಚೆಟ್ಟಿ, ಕುಂದುಕೆರೆ ಭಾಗದ ಜನರಿಗೆ ಮತ್ತು ಆದಿವಾಸಿ ಹಾಡಿಗಳಾದ ಆಡಿನ ಕಣಿವೆ, ಕಾರೇಮಾಳ, ಚೆನ್ನಿಕಟ್ಟೆ, ಉಪಕಾರ ಕಾಲನಿ ಜನರ ಉಪಯೋಗಕ್ಕೆ ಹಾಗೂ ಮತ್ತೊಂದು ವಾಹನ ಮದ್ದೂರು ವಲಯ ವ್ಯಾಪ್ತಿಯ ಗ್ರಾಮಗಳು ಮತ್ತು ಮದ್ದೂರು ಕಾಲನಿ ಜನರಿಗೆ ನೀಡಲಾಗಿದೆ. ಇವು ದಿನದ 24 ಗಂಟೆ ಸೇವೆ ಒದಗಿಸುತ್ತವೆ.


ಅಗತ್ಯವಿರುವವರು ಸೋಮ, ನಿಸ್ತಂತು ನಿರ್ವಾಹಕ (ಮೊ. 9481995226), ಗಣೇಶ್, ವಾಹನ ಚಾಲಕ (ಮೊ. 8277569655 )ಬಂಡೀಪುರ ವಲಯ, ಮನು, ವಾಹನ ಚಾಲಕ ಮೊ: 8277268161 ಮದ್ದೂರು ವಲಯ ಇವರಿಗೆ ಕರೆ ಮಾಡಬಹುದು ಎಂದು ಅರಣ್ಯ ಇಲಾಖೆ ತಿಳಿಸಿದೆ.