ಶೃಂಗೇರಿಯಲ್ಲಿ ಪಶು ಚಿಕಿತ್ಸಾಲಯದ ಆಂಬುಲೆನ್ಸ್ ಸೇವೆಗೆ ಶಾಸಕ ಟಿ.ಡಿ.ರಾಜೇಗೌಡ ಹಸಿರು ನಿಶಾನೆ ತೋರಿದರು. ಡಾ. ವೆಂಕಟೇಶ್, ಪ್ರವೀಣ್ ಪೂಜಾರಿ, ಕೆ.ಆರ್.ವೆಂಕಟೇಶ್, ಮುರಳೀಧರ ಪೈ ಇತರರಿದ್ದರು. 
ಜಿಲ್ಲೆ

ಜಾನುವಾರು ಚಿಕಿತ್ಸೆಗೆ ಆಂಬುಲೆನ್ಸ್

ಎಸ್.ಎನ್.ರವೀಂದ್ರ

ಶೃಂಗೇರಿ: ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಜಾನುವಾರುಗಳ ಚಿಕಿತ್ಸೆಗೆ ನೀಡಲಾದ ಆಂಬುಲೆನ್ಸ್ ಸೇವೆಗೆ ಶಾಸಕ ಟಿ.ಡಿ.ರಾಜೇಗೌಡ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಜಾನುವಾರುಗಳಿಗೆ ಅನಾರೋಗ್ಯ ಹಾಗೂ ಲಸಿಕೆ ನೀಡಲು 1962 ಸಂಖ್ಯೆಗೆ ಕರೆ ಮಾಡಿದರೆ ಮನೆಬಾಗಿಲಿಗೆ ಬಂದು ಸೇವೆ ನೀಡಲು ಅವಕಾಶವಿದೆ. ಹೈನುಗಾರರು ಸೇವೆ ಬಳಸಿಕೊಳ್ಳಬೇಕು ಎಂದರು. ತಾಲೂಕು ಪಶುವೈದ್ಯಾಧಿಕಾರಿ ಡಾ. ವೆಂಕಟೇಶ್, ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ, ಪಪಂ ಸದಸ್ಯ ರಫೀಕ್ ಅಹಮದ್, ಕಾಂಗ್ರೆಸ್ ಮುಖಂಡರಾದ ಕೆ.ಆರ್.ವೆಂಕಟೇಶ್, ಮುರಳೀಧರ ಪೈ ಇದ್ದರು.