ಹುಬ್ಬಳ್ಳಿ: ತಾಲೂಕಿನ ಬೆಳಗಲಿಯಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಹಾಗೂ ಶ್ರೀ ಗಂಗಾ ಪರಮೇಶ್ವರಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ದೇವಸ್ಥಾನ ಉದ್ಘಾಟನೆ ಹಾಗೂ ಜಯಂತ್ಯುತ್ಸವ ಜ. 18ರಿಂದ ನಡೆಯಲಿದೆ.
ಜ. 18ರಂದು ಮಧ್ಯಾಹ್ನ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಹಾಗೂ ಶ್ರೀ ಗಂಗಾ ಪರಮೇಶ್ವರಿ ಮೂರ್ತಿಗಳ ಮೆರವಣಿಗೆ ಗ್ರಾಮದಲ್ಲಿ ವಿವಿಧ ವಾದ್ಯಮೇಳಗಳೊಂದಿಗೆ ನಡೆಯಲಿದೆ. ರಾತ್ರಿ ಮಹಾಪ್ರಸಾದ ನಂತರ ಭಜನಾ ಕಾರ್ಯಕ್ರಮ ನಡೆಯಲಿದೆ.
ಜ. 19ರಂದು ಬೆಳಗ್ಗೆ ನವಗ್ರಹ ಪೂಜೆ, ಹೋಮ, ಹವನ, ಶ್ರೀ ಮರುಳಸಿದ್ದ ಸ್ವಾಮೀಜಿಗಳಿಂದ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಜರುಗಲಿದೆ. ನಂತರ ಧರ್ಮಸಭೆ ನಡೆಯಲಿದೆ. ಸಂಜೆ 7ಕ್ಕೆ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ಜ. 21ರಂದು ಮೂರ್ತಿಗಳಿಗೆ ಗ್ರಾಮಸ್ಥರಿಂದ ಪೂಜೆ, ಮಹಾಪ್ರಸಾದ ಮುಂತಾದ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.