ಶಿರಾಳಕೊಪ್ಪದ ತಡಗಣಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು. ಎಂ.ನವೀನಕುಮಾರ್, ಯಳಗೇರಿ ಬಸವರಾಜಪ್ಪ, ಈರಪ್ಪ ತಡಗಣಿ, ಕೋಡಿಹಳ್ಳಿ ಧರ್ಮಪ್ಪ ಇತರರಿದ್ದರು. 
ಜಿಲ್ಲೆ

ನೇರ ಸ್ವಭಾವದ ಅಂಬಿಗರ ಚೌಡಯ್ಯ

Shivamogga - Desk - Megha MS

ಶಿರಾಳಕೊಪ್ಪ: ನೇರ ಮತ್ತು ನಿಷ್ಠುರ ಸ್ವಭಾವದ ಅಂಬಿಗರ ಚೌಡಯ್ಯ ೧೨ನೇ ಶತಮಾನದ ಅನುಭವ ಮಂಟಪದ ವಿರೋಧ ಪಕ್ಷÀದ ನಾಯಕರಾಗಿದ್ದರು ಎಂದು ತಾಳಗುಂದ ಹಾಗೂ ಉಡುಗಣಿ ಹೋಬಳಿ ಗಂಗಾಮತ ಸಮಾಜದ ಅಧ್ಯಕ್ಷ ಹಿರೇಜಂಬೂರು ಬಸವರಾಜಪ್ಪ ಹೇಳಿದರು.
ತಡಗಣಿ ಗ್ರಾಮದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಮಾತನಾಡಿ, ಅಂಬಿಗರ ಚೌಡಯ್ಯ ಮೂಢನಂಬಿಕೆ, ಸಾಮಾಜಿಕ ಅಸಮಾನತೆ ವಿರುದ್ಧ ಧ್ವನಿ ಎತ್ತಿದ್ದರು. ಆದರೆ ಇಂದು ಜನರಿಗೆ ಈ ವಿಚಾರಗಳ ಬಗ್ಗೆ ಮಾತನಾಡಲು ಸಮಯವೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಾಲೂಕು ಗಂಗಾಮತ ಸಮಾಜದ ನೌಕರರ ಸಂಘದ ಅಧ್ಯಕ್ಷ ಪರಮೇಶ್ವರ ಮಾತನಾಡಿ, ನಾನೊಬ್ಬ ನಿಜ ಶರಣ ಎಂದು ಧೈರ್ಯದಿಂದ ಘೋಷಿಸಿಕೊಂಡ ಮೊದಲ ನಿಜಶರಣ ಅಂಬಿಗರ ಚೌಡಯ್ಯ. ತನಗೆ ಗುತ್ತಲ ರಾಜ ಉಡುಗೊರೆ ನೀಡಿದ ಗ್ರಾಮವನ್ನು ಜನರಿಗೆ ಮತ್ತೆ ದಾನವಾಗಿ ನೀಡಿದರು. ಇಂದಿಗೂ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಚೌಡಯ್ಯ ದಾನಾಪುರ ಎಂದೇ ಪ್ರಸಿದ್ಧಿ ಪಡೆದಿದೆ ಎಂದು ತಿಳಿಸಿದರು.
ಅಂಬಿಗರ ಚೌಡಯ್ಯ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಎಂ.ನವೀನಕುಮಾರ್, ಗಂಗಾಮತ ಸಮಾಜದ ಗೌರವಾಧ್ಯಕ್ಷ ಯಳಗೇರಿ ಬಸವರಾಜಪ್ಪ, ಪ್ರಧಾನ ಕಾರ್ಯದರ್ಶಿ ಈರಪ್ಪ ತಡಗಣಿ, ರಾಜ್ಯ ನಿರ್ದೇಶಕ ಕೋಡಿಹಳ್ಳಿ ಧರ್ಮಪ್ಪ, ಅಡಗಂಟಿ ಆನಂದಪ್ಪ, ಗಜೇಂದ್ರ, ಉಡಗಣಿ ಚಂದ್ರಶೇಖರ, ಬಸವೇಶ್ವರ ಬ್ಯಾಂಕ್ ನಿರ್ದೇಶಕ ಷಣ್ಮುಖಪ್ಪ, ಓಂಕಾರಪ್ಪ ಹಿರೇಜಂಬೂರು ಇದ್ದರು.