ಜಿಲ್ಲೆ

ಅಂಬಿಗ ವಧು- ವರರ ಸಮಾವೇಶ

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಖಿಲ ಕರ್ನಾಟಕ ಅಂಬಿಗ ಇಂಜಿನಿಯರ್ಸ್ ಸೋಷಿಯಲ್ ವೆಲ್ ಫೆರ್ ಟ್ರಸ್ಟ್ನ 6ನೇ ವರ್ಷಾಚರಣೆ ಅಂಗವಾಗಿ ಅಂಬಿಗ ಸಮಾಜದ ವಧು- ವರರ ರಾಜ್ಯ ಮಟ್ಟದ 4ನೇ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರವನ್ನು ಸೆ. 1ರಂದು ಬೆಳಗ್ಗೆ 10 ಗಂಟೆಗೆ ನಗರದ ಸರಸ್ವತಿ ನಿಕೇತನ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಶಂಕರ ಜೀರಾಳ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟ್ರಸ್ಟ್ ರಾಜ್ಯಾಧ್ಯಕ್ಷ ಬಿ. ಮೌಲಾಲಿ, ಸಮಾಜದ ಚಿಂತಕ ಪ್ರೊ. ಬಸವರಾಜ ಸಿದ್ಧಾಶ್ರಮ ಅತಿಥಿಗಳಾಗಿ ಭಾಗವಹಿಸುವರು. ವಿವಿಧ ಕ್ಷೇತ್ರಗಳ ಸಮಾಜದ ಸಾಧಕರನ್ನು ಸನ್ಮಾನಿಸಲಾಗುವುದು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಶೇ. 85ಕ್ಕೂ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದರು.
ಟ್ರಸ್ಟ್ ಪದಾಽಕಾರಿಗಳಾದ ಸುನೀಲ ಬಾಗೇವಾಡಿ, ಉಳವಪ್ಪ ಸುಣಗಾರ, ಅಶೋಕ ಬೆಸ್ತ ಸುದ್ದಿಗೋಷ್ಠಿಯಲ್ಲಿದ್ದರು.