ಜಿಲ್ಲೆ

ದೃಶಾನ ಕರಾಟೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

Mangaluru - Nishantha Narayana

ಪುತ್ತೂರು: ಬಪ್ಪಳಿಗೆ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ೯ನೇ ತರಗತಿ ವಿದ್ಯಾರ್ಥಿನಿ ದೃಶಾನ ಎಸ್. ಸರಳಿಕಾನ ವಿದ್ಯಾಭಾರತಿ ವತಿಯಿಂದ ಖಾನಾಪುರದ ಶಾಂತಿನಿಕೇತನ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ೧೭ ವರ್ಷದೊಳಗಿನ ಬಾಲಕಿಯರ ೫೨ ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಕರಾಟೆ ಅಧ್ಯಾಪಕ ಶಿವಪ್ರಸಾದ್ ಶಿಷ್ಯೆಯಾಗಿದ್ದು, ಬೆಟ್ಟಂಪಾಡಿಯ ಸುರೇಶ್ ಗೌಡ, ವಿದ್ಯಾಶ್ರೀ ದಂಪತಿ ಪುತ್ರಿ.