ಜಿಲ್ಲೆ

ಅಂಬೇಡ್ಕರ್ ಚಿಂತನೆ ಹಲವರಿಗೆ ಸ್ಫೂರ್ತಿ

ಲೋಕೇಶ್ ಮನು. ಡಿ

ಶನಿವಾರಸಂತೆ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಾಣ ದಿನವನ್ನು ಬುಧವಾರ ಸ್ಥಳೀಯ ಸೆಸ್ಕ್ ಶಾಖಾ ಕಚೇರಿಯಲ್ಲಿ ಆಚರಿಸಲಾಯಿತು.


ಶಾಖಾಧಿಕಾರಿ ಸುದೀಪ್‌ಕುಮಾರ್ ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಮೊಂಬತ್ತಿ ಬೆಳಗಿಸಿದರು. ಡಾ.ಅಂಬೇಡ್ಕರ್ ಅವರ ಚಿಂತನೆ, ಆದರ್ಶಗಳು ಕೋಟ್ಯಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ. ದೇಶದ ಕುರಿತು ಅವರು ಕಂಡಿದ್ದ ಕನಸನ್ನು ನನಸಾಗಿಸಲು ರಾಷ್ಟ್ರದ ಪ್ರತಿಯೊಬ್ಬ ಪ್ರಜೆ ಶ್ರಮಿಸಬೇಕು ಎಂದು ಹೇಳಿದರು.


ಸಹಾಯಕಾಧಿಕಾರಿ ದೀಪಕ್, ಕಚೇರಿಯ ಮಲ್ಲೇಶ್, ರಘು, ಮಹೇಶ್ ಹಾಜರಿದ್ದರು.