ಮೋರಟಗಿಯಲ್ಲಿ ಬುಧವಾರ ದಲಿತ ಸಂಘರ್ಷ ಸಮಿತಿಯಿಂದ ಹಮ್ಮಿಕೊಂಡಿದ್ದ ಡಾ. ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಜಿಪಂ ಮಾಜಿ ಸದಸ್ಯ ಎನ್.ಆರ್. ತಿವಾರಿ ಉದ್ಘಾಟಿಸಿದರು. 
ಜಿಲ್ಲೆ

ಅಂಬೇಡ್ಕರ ಜೀವನ ವಿಶ್ವಕ್ಕೆ ಮಾದರಿ

Vijayapura - Desk - Gurappa Lokuri

ಮೋರಟಗಿ: ಶಿಕ್ಷಣ ಕ್ರಾಂತಿ ಪಣತೊಟ್ಟ ಮಹಾನ್ ಚೇತನ ಡಾ. ಬಿ.ಆರ್. ಅಂಬೇಡ್ಕರ್. ಅವರ ಚರಿತ್ರೆ ಇಡಿ ವಿಶ್ವಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾ ದಸಂಸ ಸಂಚಾಲಕ ವೈ. ಸಿ. ಮಯೂರ ಹೇಳಿದರು.

ಗ್ರಾಮದಲ್ಲಿ ಬುಧವಾರ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ 134ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಕೊಲೆ ಸುಲಿಗೆ ಅನ್ಯಾಯ ಅತ್ಯಾಚಾರ ಕಣ್ಣಾರೆ ಕಂಡ ಬಾಬಾಸಾಹೇಬರು ಪುಸ್ತಕವನ್ನೇ ದೇವರೆಂದು ನಂಬಿದರು. ಕಡು ಬಡತನದಲ್ಲಿ ಜನಿಸಿದ ಅವರು ಬೀದಿ ದೀಪದಲ್ಲಿ ಓದುವ ಮೂಲಕ ಸಂವಿಧಾನ ರಚಿಸಿ ತುಳಿತಕ್ಕೆ ಒಳಗಾದ ಸಮಾಜವನ್ನು ಎತ್ತಿ ಹಿಡಿಯುವ ಕಾರ್ಯ ಮಾಡಿದರು ಎಂದರು.

ಪೂಜ್ಯ ಸಂಘಪಾಲ ಬಂತೇಜಿ ಬುದ್ಧ ಸಿಂದಗಿ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಗೌರಮ್ಮ ನಡುವಿನಕೇರಿ ಅಧ್ಯಕ್ಷತೆ ವಹಿಸಿದರು.

ಮಾಜಿ ಸೈನಿಕರು, ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಜಿಪಂ ಮಾಜಿ ಸದಸ್ಯ ಎನ್. ಆರ್. ತಿವಾರಿ, ಎಂ. ಕೆ. ಕಣ್ಣಿ, ಮುತ್ತಪ್ಪ ಸಿಂಗೆ, ಪ್ರಕಾಶ ಅಡಗಲ್, ರವಿ ಹೋಳಿ, ಅರುಣಕುಮಾರ ಸಿಂಗೆ, ರವಿಕಾಂತ ನಡುವಿನಕೇರಿ, ವೀರನಗೌಡ ಪಾಟೀಲ, ತಮ್ಮಣ್ಣ ಬೋನಾಳ, ಭೂತಳಿ ವಾಸ್ತರಿ, ನಿಂಗಣ್ಣ ವಾಲಿಕಾರ ಇತರರಿದ್ದರು.