ಜಿಲ್ಲೆ

ಎಲ್ಲರೂ ಸಮಾನರಾಗಿ ಬದುಕುವ ಅವಕಾಶ ಕೊಟ್ಟವರು ಅಂಬೇಡ್ಕರ್

ಹುಬ್ಬಳ್ಳಿ: ಕೆಎಂಸಿಆರ್‌ಐ ಮತ್ತು ಕಿಮ್ಸ್ ಎಸ್‌ಸಿ, ಎಸ್ಟಿ ನೌಕರರ ಅಭಿವೃದ್ಧಿ ಸಂಘದಿಂದ ಇಲ್ಲಿಯ ಕರ್ನಾಟಕ ವೈದ್ಯಕೀಯ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಇತ್ತೀಚೆಗೆ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ಹಂಪಿ ಕನ್ನಡ ವಿವಿಯ ವಿಶ್ರಾಂತ ಉಪ ಕುಲಪತಿ ಡಾ. ಮಲ್ಲಿಕಾ ಘಂಟಿ ಮಾತನಾಡಿ, ಅಂಬೇಡ್ಕರ್ ಒಂದು ಸಮುದಾಯಕ್ಕೆ ಮಾತ್ರ ಸೇರಿದವರಲ್ಲ. ಸರ್ವಧರ್ಮೀಯರ, ಸಮುದಾಯಕ್ಕೆ ಅವರು ಕೊಡುಗೆ ನೀಡಿದ್ದಾರೆ. ಭವ್ಯ ಭಾರತದ ದೃಷ್ಟಿಯಿಟ್ಟುಕೊಂಡಿದ್ದ ಅಂಬೇಡ್ಕರ್, ಎಲ್ಲರೂ ಸಮಾನರಾಗಿ ಬದುಕುವ ಅವಕಾಶ ಕಲ್ಪಿಸಿದ್ದಾರೆ. ಹಾಗಾಗಿ ಎಲ್ಲರೂ ಕೂಡಿ ಜಯಂತಿಯನ್ನು ಆಚರಿಸಬೇಕೆಂದು ಸಲಹೆ ನೀಡಿದರು.

ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ, ವೈದ್ಯಕೀಯ ಅಧೀಕ್ಷಕರಾದ ಡಾ. ಈಶ್ವರ ಹಸಬಿ, ಡಾ. ರಾಜಾಶಂಕರ ಎಸ್., ಪ್ರಾಚಾರ್ಯ ಡಾ. ಗುರುಶಾಂತಪ್ಪ ಯಲಗಚ್ಚಿನ, ಆಡಳಿತಾಧಿಕಾರಿ ರಮೇಶ ಕಳಸದ, ಡಾ. ಈಶ್ವರ ಹೊಸಮನಿ, ಆವರಣಾಧಿಕಾರಿ ಉದಯಕುಮಾರ ಹೊನವಾಡಕರ, ಸಂಘದ ಅಧ್ಯಕ್ಷ ಕಾಶೀನಾಥ ಹವಳಪ್ಪ, ನಾರಾಯಣ ಹುಬಳೀಕರ, ಡಾ. ರಾಜಶೇಖರ ದ್ಯಾಬೇರಿ, ಡಾ. ಶ್ಯಾಮಸುಂದರ, ಪದ್ಮಾವತಿ ಪಿ., ಅನ್ನಪೂರ್ಣ ಘಂಟಿ, ಎಚ್.ಬಿ. ರಾಮದುರ್ಗ, ಶ್ರೀಕಾಂತ ಯಕ್ಕುಂಡಿ, ಪ್ರಿಯಾ ಡೋಲ ಇತರರು ಇದ್ದರು.