ಜಿಲ್ಲೆ

ಸಾಮಾಜ ಸುಧಾರಕರಾಗಿದ್ದ ಅಂಬೇಡ್ಕರ್

ಪ್ರಸಿನ್ ಕೆ.ಆರ್

ಸರಗೂರು: ಬಿ.ಆರ್.ಅಂಬೇಡ್ಕರ್ ಅವರು ಭಾರತೀಯ ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ರಾಜಕಾರಣಿ ಮತ್ತು ಸಾಮಾಜಿಕ ಸುಧಾರಕರಾಗಿದ್ದರು ಎಂದು ಲೇಖಕ ರಘೋತ್ತಮ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಿಂದ ಹಮ್ಮಿಕೊಂಡಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಬೇಡ್ಕರ್ ಅವರು ದಲಿತರಲ್ಲಿ ನಾಯಕತ್ವವನ್ನು ಸ್ಥಾಪಿಸಿದರು ಹಾಗೂ ದಲಿತರ ಪರವಾಗಿ ನಿರಂತರ ಹೋರಾಟ ಕೈಗೊಂಡಿದ್ದರು ಎಂದು ಸ್ಮರಿಸಿದರು.

ತಹಸೀಲ್ದಾರ್ ಮೋಹನ ಕುಮಾರಿ ಮಾತನಾಡಿ, ಬಿ.ಆರ್.ಅಂಬೇಡ್ಕರ್ ಅವರು ಸಾಮಾಜಿಕ ತಾರತಮ್ಯದ ವಿರುದ್ಧ ಹೋರಾಡಿದ ಮಹಾನ್ ನಾಯಕರಾಗಿದ್ದಾರೆ. ಸಂವಿಧಾನದ ಮೂಲಕ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದ ಮಹಾನ್ ಚೇತನ ಎಂದು ಹೇಳಿದರು.

ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ವೈ.ಡಿ. ರಾಜಣ್ಣ, ಮಾಜಿ ಜಿಪಂ ಸದಸ್ಯ ಭಾಗ್ಯಲಕ್ಷ್ಮೀ, ಚಿಕ್ಕವೀರನಾಯಕ, ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಸರಗೂರು ಶಿವಣ್ಣ, ಪ.ಪಂ.ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಎಸ್ಸಿ-ಎಸ್ಟಿ ಸಮಿತಿ ಸದಸ್ಯ ಕುರ್ಣೆಗಾಲ ಬೆಟ್ಟಸ್ವಾಮಿ ಮಾತನಾಡಿದರು.

ಇಒ ಪ್ರೇಮ್ ಕುಮಾರ್, ಜೆಡಿಎಸ್ ತಾಲೂಕು ಅಧ್ಯಕ್ಷ ಗೋಪಾಲಸ್ವಾಮಿ, ನಾಯಕ ಸಮಾಜದ ಅಧ್ಯಕ್ಷ ಶಂಭುಲಿಂಗನಾಯಕ, ಅಕ್ರಮ ಸಕ್ರಮ ಸಮಿತಿ ಸದಸ್ಯ ಶಿವಶಂಕರ್, ಪ್ರಭುಸ್ವಾಮಿ, ಗ್ರಾಪಂ ಸದಸ್ಯ ಲಂಕೆ ರಮೇಶ್, ಮಹೇಶ್, ಪ.ಪಂ.ಮುಖ್ಯಾಧಿಕಾರಿ ಎಸ್ ಕೆ ಸಂತೋಷ ಕುಮಾರ್, ಗ್ರೇಡ್ 2 ತಹಸಿಲ್ದಾರ್ ಪರಶಿವಮೂರ್ತಿ ಇತರರಿದ್ದರು.