ಕಟಗೇರಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವವನ್ನು ಯುವ ಮುಖಂಡ ಚಿದಾನಂದ ಸವದಿ ಉದ್ಘಾಟಿಸಿದರು. ಸದಾಶಿವ ಬುಟಾಳಿ, ಕಲ್ಮೇಶ ಮಡ್ಡಿ, ಗುರುಪಾದ ಸವದಿ, ಅಶೋಕ ಮಗದುಮ್ಮ ಇತರರು ಇದ್ದರು. 
ಜಿಲ್ಲೆ

ಅಂಬೇಡ್ಕರ್ ಕೇವಲ ಒಂದು ವರ್ಗಕ್ಕೆ ಸೀಮಿತವಾಗದಿರಲಿ

ಪ್ರಶಾಂತ ಹೂಗಾರ

ಅಥಣಿ ಗ್ರಾಮೀಣ: ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚನೆ ಮಾಡದಿದ್ದರೆ ಸಾಮಾಜಿಕ, ಶೈಕ್ಷಣಿಕವಾಗಿ ಸಮಾನತೆ ತರಲು ಸಾಧ್ಯವಾಗುತ್ತಿರಲಿಲ್ಲ ಎಂದು ಯುವ ಮುಖಂಡ ಚಿದಾನಂದ ಸವದಿ ಹೇಳಿದರು.

ಅಥಣಿ ತಾಲೂಕಿನ ಕಟಗೇರಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ಸಂವಿಧಾನದಲ್ಲಿ ನೀಡಿದ ಹಕ್ಕು ಕರ್ತವ್ಯಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಅಂಬೇಡ್ಕರ್ ಅವರನ್ನು ಕೇವಲ ಒಂದು ವರ್ಗಕ್ಕೆ ಸೀಮಿತಗೊಳಿಸಬಾರದು ಎಂದರು.

ಉದ್ಯಮಿ ಸದಾಶಿವ ಬುಟಾಳಿ ಮಾತನಾಡಿ, ಬಾಲ್ಯದಲ್ಲಿ ಕಷ್ಟದ ದಿನಗಳನ್ನು ಕಳೆದ ಬಾಬಾಸಾಹೇಬರು ಅನೇಕ ಸವಾಲುಗಳನ್ನು ಎದುರಿಸಿದ್ದಾರೆ. ಶಿಕ್ಷಣ ಎಂಬ ಅಸ್ತ್ರದಿಂದ ದೇಶದ ಸಂವಿಧಾನ ಬರೆದಿದ್ದಾರೆ. ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪುರಸಭೆ ಸದಸ್ಯ ಕಲ್ಮೇಶ ಮಡ್ಡಿ, ಗ್ರಾಪಂ ಅಧ್ಯಕ್ಷ ಗುರುಪಾದ ಸವದಿ, ಮುಖಂಡ ಅಶೋಕ ಮಗದುಮ್ಮ, ಎಸ್.ಎಲ್.ಕಾಂಬಳೆ, ಅಪ್ಪಣ್ಣ ಕಾಡಪ್ಪಗೋಳ, ಸಿದ್ದಾರೂಢ ಕಾಂಬಳೆ, ಗುರುಪಾದ ಸೊನ್ನದ, ಶಿವಪ್ಪ ಗಣಿ, ಲಕ್ಷ್ಮಣ ಮರೆಗುದ್ದಿ, ಪಿ.ಎಲ್.ಪೂಜಾರಿ ಇತರರಿದ್ದರು.