ನೆಲಮಂಗಲ: ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಜತೆಗೆ ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತದೊಂದಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಕರ್ಯ ಕಲ್ಪಿಸುವುದೇ ಸ್ವಾತಂತ್ರ್ಯೋತ್ಸವದ ಉದ್ದೇಶವಾಗಬೇಕು ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಶುಕ್ರವಾರ ಧ್ವಜವಂದನೆ ಸ್ವೀಕರಿಸಿ ಮಾತನಾಡಿದರು. ಪ್ರತಿಯೊಬ್ಬರು ದೇಶಭಕ್ತಿ ಬೆಳೆಸಿಕೊಂಡು ಕರ್ತವ್ಯ ಪಾಲಿಸಬೇಕಿದೆ. ಸ್ವಾತಂತ್ರ$್ಯ ನಂತರ ದೇಶದಲ್ಲಿ ಬಡತನ ಹೆಚ್ಚಾಗಿದ್ದು, ಅಂದಿನ ಪ್ರಧಾನಿ ಜವಹರ್ ಲಾಲ್ ನೆಹರು ಸೇರಿ ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರು ಬಡತನ ನಿಮೂರ್ಲನೆಗೆ ಸಾಕಷ್ಟು ಯೋಜನೆ ಜಾರಿಗಳಿಸಿದ್ದಾರೆ. ದೇಶಕ್ಕೆ ಅಂಬೇಡ್ಕರ್ ಸಂವಿಧಾನದ ಮೂಲಕ ಸಮಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದ್ದಾರೆ ಎಂದರು.
ತಹಸೀಲ್ದಾರ್ ಮಲ್ಲೇಶಬೀರಪ್ಪ ಪೂಜಾರ್ ಧ್ವಜರೋಹಣ ನೆರವೇರಿಸಿದರು. ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದು ವಿದ್ಯಾರ್ಥಿಗಳು ಸೇರಿ ವಿವಿಧ ೇತ್ರದ ಸಾಧಕರನ್ನು ಗೌರವಿಸಲಾಯಿತು. ಪೊಲೀಸರು, ಎನ್.ಸಿ.ಸಿ. ಸೇರಿ ವಿವಿಧ ಶಾಲಾ ಮಕ್ಕಳ ಪಥಸಂಚಲನ ಮತ್ತು ಧ್ವಜವಂದನೆ ಸ್ವೀಕರಿಸಿದ ದೃಶ್ಯ ಗಮನಸೆಳೆಯಿತು. ವಿವಿಧ ಶಾಲೆಯ ಮಕ್ಕಳು ಸಾಂಸತಿಕ ಕಾರ್ಯಕ್ರಮ ನಡೆಸಿಕೊಟ್ಟರು. ನಗರಸಭೆ ಅಧ್ಯಕ್ಷ ಎನ್.ಗಣೇಶ್, ಉಪಾಧ್ಯಕ್ಷ ಜಿ.ಆನಂದ್, ಸ್ಥಾಯಿಸಮಿತಿ ಅಧ್ಯಕ್ಷ ಪದ್ಮನಾಬ್ ಪ್ರಸಾದ, ನಿಟಕಪೂರ್ವ ಅಧ್ಯೆ ಪೂರ್ಣಿಮಾ ಸುಗ್ಗರಾಜು, ಸದಸ್ಯ ಪ್ರದಿಪ್, ಚೇತನ್, ಸುಜಾತಾ ಮುನಿಯಪ್ಪ, ಲೋಕಾ ಗಂಗಾಧರ್, ಸುಧಾ ಕೃಷ್ಣಪ್ಪ, ಭಾರತಿಬಾಯಿ ನಾರಾಯಣ್ರಾವ್, ಪೌರಾಯುಕ್ತ ಗಂಗಾಧರ್, ಮುಖಂಡ ಎಂ.ಕೆ.ನಾಗರಾಜು, ಟಿ.ನಾಗರಾಜು, ಕೆ.ಕೃಷ್ಣಪ್ಪ, ಕೆಂಪರಾಜು, ಕೆ.ವಸಂತ್, ನಾರಾಯಣ್ಗೌಡ, ಪ್ರಕಾಶ್, ಸಿ.ಎಂ.ಗೌಡ, ನಾಗೇಶ್ ಇದ್ದರು.
ಸರ್ಕಾರಕ್ಕೆ ಕೃತತೆ : ಸರ್ಕಾರ ಪಂಚ ಗ್ಯಾರಂಟಿ ನೀಡುತ್ತಿದ್ದು, ಕ್ಷೇತ್ರಕ್ಕೆ ಅನ್ನಭಾಗ್ಯ ಯೋಜನೆಯಡಿ 51 ಸಾವಿರ ಪಡಿತರ ಚೀಟಿಗೆ 33 ಕೋಟಿ ಹಾಗೂ ಗೃಹ ಜ್ಯೋತಿ 86 ಕೋಟಿ ರೂ., ಶಕ್ತಿ ಯೋಜನೆಯಡಿ 36 ಕೋಟಿ ರೂ., ಗೃಹಲ್ಮ ಯೋಜನೆಯಡಿ 160 ಕೋಟಿ ರೂ., ಯುವನಿಧಿ 21 ಲಕ್ಷ ರೂ. ಸೇರಿ ಕ್ಷೇತ್ರದ ಜನತೆಗೆ ಯಾವುದೇ ದಳ್ಳಾಳಿಲ್ಲದೆ ಸುಮಾರು 323 ಕೋಟಿಗೂ ಹೆಚ್ಚು ಹಣ ನೇರವಾಗಿ ಗ್ರಾಹಕರ ಖಾತೆಗೆ ಸೇರಿಸಿದೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.