ಬೆಣಗಾಲು. ಸಂಘದ ಆವರಣದಲ್ಲಿ ಕೇಕ್ ಕತ್ತರಿಸುವ ಮಾಡುವ ಮೂಲಕ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಧನರಾಜ್, ಶ್ರೀಕಾಂತ್, ದಯಾನಂದ, ಸತೀಶ್, ಕಿರಣ್, ಪುಟ್ಟ, ರಾಜೇಶ್ ಇದ್ದರು. 
ಜಿಲ್ಲೆ

ಬೆಣಗಾಲು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ

ಬೈಲುಕುಪ್ಪೆ: ಬೆಣಗಾಲು ಗ್ರಾಮದ ಮುಖ್ಯರಸ್ತೆ ಪಕ್ಕದಲ್ಲಿ ಮಹಾ ಚೇತನ ಯುವ ವೇದಿಕೆ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಆವರಣದಲ್ಲಿ ಕೇಕ್ ಕತ್ತರಿಸುವ ಮೂಲಕ ಇತ್ತೀಚೆಗೆ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ಯುವಕರು ಸ್ಕೂಟರ್ ಜಾಥಾ ಮೂಲಕ ಬೆಣಗಾಲು ಮುಖ್ಯರಸ್ತೆಯ ಮಾರ್ಗದಲ್ಲಿ ತೆರಳಿ ಸುಂಕದಳ್ಳಿ, ಅವರ್ತಿ, ಕೊಪ್ಪ, ನಿಲವಾಡಿ ಹಾಗೂ ಸುಂದರ ನಗರಕ್ಕೆ ತಲುಪಿ ನಂತರ ವಾಪಸ್ ಬೆಣಗಾಲು ಗ್ರಾಮದ ಸಂಘದ ಆವರಣಕ್ಕೆ ಆಗಮಿಸಿದರು. ಜಯಂತಿ ಅಂಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಯುವಕರು ಹಾಗೂ ಯುವತಿಯರಿಗೆ ಕ್ರೀಡೆ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಿಗೆ ಸಂಘದ ವತಿಯಿಂದ ಬಹುಮಾನ ವಿತರಿಸಲಾಯಿತು. ನಂತರ ವೇದಿಕೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮುಖಂಡ ಧನರಾಜ್, ಸಂಘದ ಪದಾಧಿಕಾರಿಗಳಾದ ಶ್ರೀಕಾಂತ್, ರಾಜೇಶ್, ಕಿರಣ್, ಶಶಿ, ಪುಟ್ಟ, ದಯಾನಂದ, ಸತೀಶ್, ಹನುಮಂತ, ಗಣೇಶ ಇತರರು ಇದ್ದರು.