ಮರಿಯಮ್ಮನಹಳ್ಳಿಯ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಜಿಪಂ ಮಾಜಿ ಸದಸ್ಯ ಉದ್ಘಾಟಿಸಿದು. ಪಪಂ ಸದಸ್ಯ ಎಲ್.ವಸಂತ ಕುಮಾರ್, ಮರಡಿ ಸುರೇಶ್, ಎಲ್.ನಾಗರಾಜ್, ಎಲ್.ಮಂಜುನಾಥ, ಬಿಸರಳ್ಳಿ ಹುಲುಗಪ್ಪ ಇತರರಿದ್ದರು.  
ಜಿಲ್ಲೆ

ಅಂಬೇಡ್ಕರ್ ಆದರ್ಶ ಅಳವಡಿಸಿಕೊಳ್ಳಿ

Gangavati - Desk - Veeresh S Ullagaddi

ಮರಿಯಮ್ಮನಹಳ್ಳಿ: ಯುವಕರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಧೃಡ ಸಮಾಜ ಕಟ್ಟಬೇಕು ಎಂದು ಜಿಪಂ ಮಾಜಿ ಸದಸ್ಯ ಎಲ್.ಮಂಜುನಾಥ ಹೇಳಿದರು.


ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯುವಕರು ದುಶ್ಚಟಗಳಿಗೆ ಒಳಗಾಗಿ ಬದುಕಿನ ಸಾಮರಸ್ಯವನ್ನು ಮರೆಯುತ್ತಿದ್ದಾರೆ. ಸಮಾಜದಲ್ಲಿ ಎಲ್ಲರೊಂದಿಗೆ ಅನ್ಯೋನ್ಯವಾಗಿ, ಸಂತೋಷದಿಂದ ಬಾಳುವುದಕ್ಕೆ ಅಂಬೇಡ್ಕರ್ ನಮಗೆ ಸಂವಿಧಾನ ಕೊಟ್ಟಿದ್ದಾರೆ. ಆಧುನಿಕ ಜಗತ್ತಿನಲ್ಲಿ ಪ್ರತಿಯೊಬ್ಬರ ಜೀವನಶೈಲಿ ಬದಲಾಗಿದ್ದು, ಪ್ರಜ್ಞಾವಂತ ಯುವಕರು ಅಂಬೇಡ್ಕರ್ ಆದರ್ಶಗಳನ್ನು ಬೆಳೆಸಿಕೊಂಡು ಸ್ವಚ್ಛ ಸಮಾಜ ನಿರ್ಮಿಸಬೇಕು ಎಂದರು.

ಹನುಮಂತ, ಬಸವರಾಜ್, ಆನಂದ, ಎಚ್.ಪರಶುರಾಮ, ಸುಧಕಾರ್, ಎಂ.ಪ್ರಕಾಶ್, ರವಿಕುಮಾರ್, ಗಂಗಾಧರ, ಪರಶುರಾಮ್, ಚೇತನ್, ಸ್ವಾಮಿ, ಶಶಿಧರ್, ಉಮೇಶ್, ರಾಹುಲ್, ಎಂ.ಹುಲಿಗೆಮ್ಮ ಇತರರಿದ್ದರು.