ಜಿಲ್ಲೆ

ಅಂಬೇಡ್ಕರ್ ಪ್ರೌಢಶಾಲೆ ಶೇ.81 ಫಲಿತಾಂಶ

ರವಿ ಎಸ್. ಬಳೂಟಗಿ

ಕಲಘಟಗಿ: ತಾಲೂಕಿನ ಮಿಶ್ರಿಕೋಟಿ ಗ್ರಾಮದ ಡಾ. ಅಂಬೇಡ್ಕರ್ ಶಿಕ್ಷಣ ಸಂಸ್ಥೆಯ ಅಂಬೇಡ್ಕರ್ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ. 81ರಷ್ಟು ಆಗಿದೆ. ಪರೀಕ್ಷೆಗೆ ಹಾಜರಾದ 57 ವಿದ್ಯಾರ್ಥಿಗಳಲ್ಲಿ 46 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಸುಕನ್ಯಾ ಬಿ. ಕುಬಸದ ಶೇ. 93.76 ಫಲಿತಾಂಶದೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ವೀರಯ್ಯ ನಾ. ಬ್ಯಾಹಟ್ಟಿ ಶೇ. 93.88 ಅಂಕ ಗಳಿಸಿ ದ್ವಿತೀಯ, ಲಕ್ಷ್ಮೀ ಸ. ಪುರದಣ್ಣವರ ಶೇ. 90.56 ತೃತೀಯ ಸ್ಥಾನ ಪಡೆದಿದ್ದಾರೆ. ರೇಖಾ ಸಣ್ಣಪೂಜಾರ ಶೇ. 86.56, ಅಂಜುಮಾ ರಾ. ಕಮಡೊಳ್ಳಿ ಶೇ.86.08, ಪ್ರಿಯಾ ಹುಗ್ಗೆಣ್ಣವರ ಶೇ.83.52, ಪ್ರಿಯಾ ಸೂರ್ಯವಂಶಿ ಶೇ. 81.28, ಭಾರತಿ ಪುರದಣ್ಣವರ ಶೇ. 82.83, ಪ್ರೇಮಾ ಕಿಳ್ಳಿಕೇತರ ಶೇ. 81.44, ರಾಜೇಸಾಬ್ ನದಾಫ್ ಶೇ. 81.12ರಷ್ಟು ಅಂಕ ಗಳಿಸಿದ್ದಾರೆ. ಸಾಧನೆಗೈದ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯಶಿಕ್ಷಕರು, ಶಿಕ್ಷಕರು, ಸಿಬ್ಬಂದಿ ಅಭಿನಂದಿಸಿದ್ದಾರೆ.