ದೇವದುರ್ಗ ತಾಲೂಕು ಹೇಮನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳ ನಡೆ ಸಂವಿಧಾನ ಕಡೆ ಕಾರ್ಯಕ್ರಮ ಜರುಗಿತು. ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹನುಮಂತ್ರಾಯ ಶಾಖೆ, ಪ್ರಾಚಾರ್ಯ ಖೇಮಣ್ಣ ಪವಾರ್, ಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಸವರಾಜ ಬ್ಯಾಗವಾಟ್, ಮುಖ್ಯಶಿಕ್ಷಕಿ ರೇವಮ್ಮ ಸತೀಶ, ಗುರುನಾಥ ಇಂಗಳದಾಳ ಇದ್ದರು. 
ಜಿಲ್ಲೆ

ಡಾ.ಅಂಬೇಡ್ಕರ್ ಕೊಡುಗೆ ಅಪಾರ

Kopala - Desk - Eraveni

ದೇವದುರ್ಗ: ಜಾತಿ, ಮತ, ಧರ್ಮ, ಬಡವ, ಶ್ರೀಮಂತ ಎನ್ನದೇ ಎಲ್ಲರಿಗೂ ಸಮಾನ ಅವಕಾಶ, ಅಧಿಕಾರ ನೀಡಿದ್ದು ಸಂವಿಧಾನ. ಹೀಗಾಗಿ ಸರ್ವರಿಗೂ ಸಂವಿಧಾನವೇ ಶ್ರೇಷ್ಠವಾದ ಸಂಪತ್ತು ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹನುಮಂತ್ರಾಯ ಶಾಖೆ ಹೇಳಿದರು.

ತಾಲೂಕಿನ ಹೇಮನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಮತಾ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆಯಿಂದ ಆಯೋಜಿಸಿದ್ದ ವಿದ್ಯಾರ್ಥಿಗಳ ನಡೆ ಸಂವಿಧಾನ ಕಡೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

ಸಂವಿಧಾನದಡಿ ಅತ್ಯಂತ ಪ್ರಭಾವಶಾಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ. ಡಾ.ಅಂಬೇಡ್ಕರ್ ದೇಶಕ್ಕೆ ನೀಡಿದ ಕೊಡುಗೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು.

ಶ್ರೀಬಸವೇಶ್ವರ ಡಿಇಡಿ ಕಾಲೇಜ್ ಪ್ರಾಚಾರ್ಯ ಖೇಮಣ್ಣ ಪವಾರ್ ಮಾತನಾಡಿದರು. ಶಿಕ್ಷಕ ಬಸವಲಿಂಗಪ್ಪ ಸಂವಿಧಾನ ಪೀಠಿಕೆ ಬೋಧಿಸಿದರು. ಸಂವಿಧಾನದ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು.

ಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಸವರಾಜ ಬ್ಯಾಗವಾಟ್, ಮುಖ್ಯಶಿಕ್ಷಕಿ ರೇವಮ್ಮ ಸತೀಶ, ಉಪಸಂಚಾಲಕ ಗುರುನಾಥ ಇಂಗಳದಾಳ, ಶಿಕ್ಷಕರಾದ ಬಸವಲಿಂಗಪ್ಪ, ಯಲ್ಲನಗೌಡ, ಮಹಾದೇವ, ಚಿತಾವಲಿ, ಪಂಪದೇವ, ಮುತ್ತಪ್ಪ, ಶೈಲಾ ಸಜ್ಜನ್, ಸುಧಾ, ಬಿ.ಪ್ರಾಣೇಶ ಇದ್ದರು.