ಹನುಮಂತಪ್ಪ 
ಜಿಲ್ಲೆ

ಅಂಬೇಡ್ಕರ್ ವೃತ್ತ ಮರುನಿರ್ಮಾಣ ಪೂರ್ಣಗೊಳಿಸಿ

ದೇವದುರ್ಗ:ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮರುನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿದ್ದು ಶಾಸಕಿ ಕರೆಮ್ಮ ಜಿ.ನಾಯಕ, ಕಾಮಗಾರಿ ಸಂಪೂರ್ಣ ನಿರ್ಲಕ್ಷ್ಯ ಮಾಡುವ ಮೂಲಕ ಸಂವಿಧಾನ ಶಿಲ್ಪಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ತಾಲೂಕು ಸಂಚಾಲಕ ಹನುಮಂತಪ್ಪ ಮನ್ನಾಪುರ ಆರೋಪಿಸಿದರು.

ಪಟ್ಟಣದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಪುತ್ಥಳಿ ಸೇರಿ ಅಭಿವೃದ್ಧಿ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಸದರಿ ಕಾಮಗಾರಿ ಡಾ.ಅಂಬೇಡ್ಕರ್ ಜಯಂತಿಯೊಳಗೆ ಪೂರ್ಣಗೊಳಿಸಬೇಕು. ನಿರ್ಲಕ್ಷ್ಯ ಮಾಡಿದರೆ ಕಲ್ಮಲಾ ತಿಂಥಣಿ ಬ್ರಿಡ್ಜ್ ರಾಜ್ಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಲಾಗುವುದು.

ಅಂಬೇಡ್ಕರ್ ವೃತ್ತ ಮರುನಿರ್ಮಾಣ ಕಾಮಗಾರಿ ಟೆಂಡರ್ ನೀಡಿ 19ತಿಂಗಳು ಗತಿಸುತ್ತಾ ಬಂದಿದ್ದು ಇದುವರೆಗೆ ಪೂರ್ಣಗೊಳಿಸಿಲ್ಲ. ಕಾಮಗಾರಿ ಪೂರ್ಣಗೊಳಿಸದೆ ಶಾಸಕಿಯ ಹಿಂಬಾಲಕರು ದುಂಡಾವರ್ತನೆ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಮುಖಂಡರಾದ ಮಹಾಂತೇಶ ಭವಾನಿ, ಮೋಹನ್ ಬಲಿದವ್, ಮಂಜುನಾಥ್ ಹೇರುಂಡಿ, ಬಸವರಾಜ, ಕ್ರಾಂತಿಕುಮಾರ ಇತರರಿದ್ದರು.