ಜಿಲ್ಲೆ

ಅಂಬೇಡ್ಕರ್ ಭವನ ಕಟ್ಟಡ ಶಿಥಿಲಾವಸ್ಥೆ : ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಭೇಟಿ ನೀಡಿ ಪರಿಶೀಲನೆ

ಕಡಬ: ಮುಖ್ಯ ಪೇಟೆಯಲ್ಲಿ ಶಿಥಿಲಾವಸ್ಥೆಯ ಅಂಬೇಡ್ಕರ್ ಭವನಕ್ಕೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸುನೀತಾ ಕುಮಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಡಬದಲ್ಲಿ ಇತ್ತೀಚೆಗೆ ಪರಿಶಿಷ್ಟ ಜಾತಿ-ಪರಿಶಿಷ್ಟ್ಟ ಪಂಗಡ ಕುಂದುಕೊರತೆಗಳ ಸಭೆಯಲ್ಲಿ ಮುಖಂಡರು ಪ್ರಸ್ತಾವನೆ ಮಾಡಿದಂತೆ ತಾಲೂಕು ಮಟ್ಟದ ಅಂಬೇಡ್ಕರ್ ಭವನ ಈಗಿರುವ ಸ್ಥಳದಲ್ಲೇ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಲಾಗಿತ್ತು. ಇದರ ಭಾಗವಾಗಿ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ದಲಿತಪರ ಸಂಘಟನೆ ಮುಖಂಡರಾದ ಶಶಿಧರ ಬೊಟ್ಟಡ್ಕ, ವಸಂತ ಕುಬಲಾಡಿ ಮತ್ತಿತರರಿದ್ದರು.

ಅಂಬೇಡ್ಕರ್ ಭವನಕ್ಕೆ ಹೆಚ್ಚುವರಿ 0.50 ಎಕರೆ ಹತ್ತಿರದ ಸರ್ಕಾರಿ ಜಾಗ ಕಾಯ್ದುರಿಸುವಂತೆ ಸಭೆಯಲ್ಲಿ ಒತ್ತಾಯಿಸಲಾಗಿತ್ತು. ಆದರೆ ಈಗ ಇರುವ ಅಂಬೇಡ್ಕರ್ ಭವನ ಬಳಿ ಸರ್ಕಾರಿ ಜಮೀನು ಇಲ್ಲವೆಂದು ತಹಸೀಲ್ದಾರ್ ಹೇಳಿದ್ದು, ಕೋಡಿಂಬಾಳ ಗ್ರಾಮದಲ್ಲಿ 0.30 ಎಕರೆ ಜಮೀನು ಕಾಯ್ದಿರಿಸಿರುವುದಾಗಿ ಹೇಳಿದ್ದರು. ಇದಕ್ಕೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.