ಹುಬ್ಬಳ್ಳಿ: ಈ ಮೊದಲೇ ತಯಾರಾಗಿದ್ದ ಕಾಷ್ಠಗಜ ಶಿಲ್ಪಕ್ಕೆ ಕಲ್ಪಿಸಲಾದ ರಜತ ಕವಚ ಹಾಗೂ 105 ಕೆಜಿ ತೂಕದ ಬೆಳ್ಳಿ ಅಂಬಾರಿಯನ್ನು ನಗರದ ಶ್ರೀ ಸಿದ್ಧಾರೂಢ ಮಠದ ಆವರಣದಲ್ಲಿ ಮಂಗಳವಾರ ಲೋಕಾರ್ಪಣೆ ಮಾಡಲಾಯಿತು.
ಇಂಚಲ ಶ್ರೀ ಡಾ. ಶಿವಾನಂದ ಭಾರತಿ ಸ್ವಾಮೀಜಿ, ಮಿಟ್ಟಿಮಲ್ಕಾಪುರದ ಶ್ರೀ ನಿಜಾನಂದ ಸ್ವಾಮೀಜಿ ಅವರು ರಜತ ಆನೆ ಅಂಬಾರಿ ಅನಾವರಣಗೊಳಿಸಿದರು.
ಸ್ವಾಗತ ಸಮಿತಿ ಗೌರವಾಧ್ಯಕ್ಷ ಡಿ.ಆರ್. ಪಾಟೀಲ, ಟ್ರಸ್ಟ್ ಕಮಿಟಿ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ್, ವೈಸ್ ಚೇರ್ಮನ್ ಮಂಜುನಾಥ ಮುನವಳ್ಳಿ, ವೇದಾಂತ ಪರಿಷತ್ ಸಮಿತಿ ಅಧ್ಯಕ್ಷ ಶ್ಯಾಮಾನಂದ ಪೂಜೇರಿ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಧರ್ಮದರ್ಶಿಗಳಾದ ಬಾಳು ಮಗಜಿಕೊಂಡಿ, ಡಾ. ಗೋವಿಂದ ಮಣ್ಣೂರು, ರಮೇಶ ಬೆಳಗಾವಿ, ಗೀತಾ ಕಲಬುರ್ಗಿ, ವಿನಾಯಕ ಘೋಡಕೆ, ಉದಯಕುಮಾರ ನಾಯ್ಕ, ಅಂದಾನೆಪ್ಪ ಚಾಕಲಬ್ಬಿ, ಚನ್ನವೀರ ಮುಂಗುರವಾಡಿ, ಬಿ.ಆರ್. ಬಾಗೇವಾಡಿ, ವಿ.ಡಿ. ಕಾಮರೆಡ್ಡಿ, ವಿ.ವಿ. ಮಲ್ಲಾಪುರ, ಸಿದ್ದನಗೌಡ ಪಾಟೀಲ, ವಸಂತ ಸಾಲಗಟ್ಟಿ ಭಾಗವಹಿಸಿದ್ದರು
ವೇದಾಂತ ಪರಿಷತ್ ಕಾರ್ಯಕ್ರಮಕ್ಕೆ 51 ಲಕ್ಷ ರೂ. ಸಂಗ್ರಹಿಸಿ ಕೊಟ್ಟ ಮಿಟ್ಟಿಮಲ್ಕಾಪುರದ ಶ್ರೀ ನಿಜಾನಂದ ಸ್ವಾಮೀಜಿ, ಅಂಬಾರಿಯ ಶಿಲ್ಪಿ ಅಶೋಕ ಬೆಳ್ಳಿಗಟ್ಟಿ ಹಾಗೂ ಇತರರನ್ನು ಸನ್ಮಾನಿಸಲಾಯಿತು.
ಸಭಾಪತಿ ಬಸವರಾಜ ಹೊರಟ್ಟಿ ದಂಪತಿ, ಮುಖಂಡರಾದ ಶರಣಪ್ಪ ಕೊಟಗಿ, ವಿ.ಜಿ. ಪಾಟೀಲ ಹಾಗೂ ಮುತ್ತಣ್ಣ ಶಿವಳ್ಳಿ ಅವರನ್ನು ಟ್ರಸ್ಟ್ ಕಮಿಟಿಯಿಂದ ಗೌರವಿಸಲಾಯಿತು
ಸೇವಾರತ್ನ ಪ್ರಶಸ್ತಿ: ವಿಶ್ವ ವೇದಾಂತ ಪರಿಷತ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದ್ದಕ್ಕಾಗಿ ಸಿದ್ಧಾರೂಢ ಸ್ವಾಮಿಯವರ ಟ್ರಸ್ಟ್ ಕಮಿಟಿ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ್, ವೈಸ್ ಚೇರ್ಮನ್ ಮಂಜುನಾಥ ಮುನವಳ್ಳಿ, ವೇದಾಂತ ಪರಿಷತ್ ಸಮಿತಿ ಅಧ್ಯಕ್ಷ ಶ್ಯಾಮಾನಂದ ಪೂಜೇರಿ ಅವರಿಗೆ ಶ್ರೀ ಸಿದ್ಧಾರೂಢರ ಸರ್ವ ಭಕ್ತರ ಪರವಾಗಿ ಚಳಕಾಪುರದ ಶ್ರೀ ಶಂಕರಾನಂದ ಸ್ವಾಮೀಜಿ ಅವರು ಆರೂಢ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.