ಕಿಕ್ಕೇರಿಯ ಅಂಗಾಳಪರಮೇಶ್ವರ ದೇವಿ ದೇಗುಲದಲ್ಲಿ ಆಡಿ ಶುಕ್ರವಾರ ಅಂಬಲಿಪೂಜೆ, ಸುಮಂಗಲಿ ಪೂಜೆ ನೆರವೇರಿತು. 
ಜಿಲ್ಲೆ

ಅಂಗಾಳಪರಮೇಶ್ವರಿಗೆ ಅಂಬಲಿ ಪೂಜೆ

ಲೋಕೇಶ್ ಮನು. ಡಿ

ಕಿಕ್ಕೇರಿ: ಇಲ್ಲಿನ ಅಂಗಾಳಪರಮೇಶ್ವರ ದೇಗುಲದಲ್ಲಿ ಆಷಾಢ ಮಾಸದ ಮುಕ್ತಾಯದ ಮರುದಿನವಾದ ಆಡಿ ಶುಕ್ರವಾರ ವಿಶೇಷ ಪೂಜೆಗಳು ನೆರವೇರಿತು.

ಅರ್ಚಕ ವಿಜಯ್ ನೇತೃತ್ವದಲ್ಲಿ ಆರಂಭವಾದ ಪೂಜಾ ಕೈಂಕರ್ಯಕ್ಕೂ ಮುನ್ನ ಅಂಗಾಳಪರಮೇಶ್ವರಿ ದೇವಿಯ ವಿಗ್ರಹ, ಆಭರಣ, ಪೀಠವನ್ನು ಪವಿತ್ರ ಗಂಗೆಯಲ್ಲಿ ಶುಚಿಗೊಳಿಸಿದರು.

ಬಳಿಕ ದೇವಿಗೆ ವಿವಿಧ ಪುಷ್ಪ, ಆಭರಣ, ವಸ್ತ್ರಗಳಿಂದ ಅಲಂಕರಿಸಲಾಯಿತು. ದೇವಿಗೆ ಆಗ್ರಪೂಜೆ ಸಲ್ಲಿಸಿ ಗಂಗಾರತಿ ಮಾಡಲಾಯಿತು. 11ಕಳಶಗಳಿಗೆ ಗಂಗೆ ತುಂಬಿ ದೇವಿ ಅವಾಹನೆ ಮಾಡಲಾಯಿತು. ಹಲವರು ಬೇವಿನಸೊಪ್ಪು, ನಿಂಬೆಹಣ್ಣು ಇಟ್ಟುಕೊಂಡು ದೇವಿಗೆ ಪೂಜೆ ಸಮರ್ಪಿಸಿದರು.

ದೇವಿಗೆ ಅಂಬಲಿ ಅಭಿಷೇಕ ನೆರವೇರಿಸಿ ದೇವಿಯ ಅವಾಹನೆ ಮಾಡಿಕೊಳ್ಳಲಾಯಿತು. ಮಹಿಳೆಯರು ದೇವಿಗೆ ಆರತಿ ಬೆಳಗಿದರು. ಭಕ್ತರಿಗೆ ಅಂಬಲಿ ಪ್ರಸಾದ ವಿತರಿಸಲಾಯಿತು.