ಹಾವೇರಿ: ಅಮೇಜಾನ್ ಡಿಸ್ಟ್ರುಬೂಟರ್ ಬಿಸಿನೆಸ್ಗೆ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ದೊರೆಯಲಿದೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ 2.2 ಲಕ್ಷ ರೂ. ವಂಚಿಸಿರುವ ಕುರಿತು ಇಲ್ಲಿಯ ಸೈಬರ್ ಕ್ರೆೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಣೆಬೆನ್ನೂರಿನ ಈಶ್ವರ ನಗರದ ಚಿಕ್ಕರಾಜ ಬೆನ್ನೂರ ಎಂಬುವರಿಗೆ ಮೋಸ ಮಾಡಿರುವುದು.
ಇವರಿಗೆ ವೈಷ್ಣವಿ ಎಂಬುವರು ಫೋನ್ ಮಾಡಿ ಅಮೇಜಾನ್ ಡಿಸ್ಟ್ರುಬೂಟರ್ ಬಿಸಿನೆಸ್ಗೆ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರಲಿದೆ ಎಂದು ನಂಬಿಸಿ ಅವರ ಮಾಹಿತಿ ಪಡೆದು 2.2 ಲಕ್ಷ ರೂ. ಹಾಕಿಸಿಕೊಂಡು ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.