ಯಳಂದೂರು ತಾಲೂಕಿನ ಕಂದಹಳ್ಳಿ ಗ್ರಾಮದ ಮಹದೇಶ್ವರ ದೇಗುಲದಲ್ಲಿ ಅಮವಾಸ್ಯೆ ನಿಮಿತ್ತ ರಥೋತ್ಸವ ಹಾಗೂ ವಿಶೇಷ ಪೂಜೆ ನೆರವೇರಿತು. 
ಜಿಲ್ಲೆ

ಮಹದೇಶ್ವರ ದೇಗುಲದಲ್ಲಿ ಅಮಾವಾಸ್ಯೆ ಪೂಜೆ

ಯಳಂದೂರು: ತಾಲೂಕಿನ ಕಂದಹಳ್ಳಿ ಗ್ರಾಮದಲ್ಲಿರುವ ಐತಿಹಾಸಿಕ ಮಹದೇಶ್ವರ ದೇಗುಲದಲ್ಲಿ  ಅಮಾವಾಸ್ಯೆ ನಿಮಿತ್ತ ವಿಶೇಷ ಪೂಜೆ ನೆರವೇರಿತು.

ಬೆಳಗ್ಗೆಯಿಂದಲೇ ಅಭಿಷೇಕ, ಬಿಲ್ವಾರ್ಚನೆ ಸೇರಿದಂತೆ ಅನೇಕ ಧಾರ್ಮಿಕ ವಿಧಿವಿಧಾನ ನೆರವೇರಿತು. ಸಾವಿರಾರು ಭಕ್ತರು ದೇಗುಲದಲ್ಲಿ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದು ಪೂಜೆ ಸಲ್ಲಿಸಿದರು. ಹರಕೆ ಹೊತ್ತ ಭಕ್ತರು ತೇರು ಎಳೆಸುವ ಮೂಲಕ, ದಂಡುಗೋಲು ಸೇರಿದಂತೆ ಇತರ ಸೇವೆಗಳನ್ನು ನೆರವೇರಿಸಿದರು. ದೇಗುಲ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು.