ಜಿಲ್ಲೆ

ಅ.೨೫ರಂದು ಅಮವಾಸ್ಯೆ ದೀಪೋತ್ಸವ ಕಾರ್ಯಕ್ರಮ

reportermys

ಮಡಿಕೇರಿ: ರಾಜರಾಜೇಶ್ವರಿ ದೇವಾಲಯ ಸಮಿತಿ ವತಿಯಿಂದ ಅ೨೫ರಂದು ಅಮವಾಸ್ಯೆ ದೀಪೋತ್ಸವ ಕಾರ್ಯಕ್ರಮ ಶ್ರೀ ರಾಜಾರಾಜೇಶ್ವರಿ ದೇವಾಲಯದಲ್ಲಿ ನಡೆಯಲಿದೆ ಎಂದು ದೇವಾಲಯದ ಧರ್ಮದರ್ಶಿ ಗೋವಿಂದಸ್ವಾಮಿ ತಿಳಿಸಿದರು.


ಅಂದು ರಾತ್ರಿ ೭ ಗಂಟೆಗೆ ಕಳಸ ಪೂಜೆ, ೮ ಗಂಟೆಗೆ ಅನ್ನದಾನ, ಪ್ರಸಾದ ವಿನಿಯೋಗ, ೯ ಗಂಟೆಗೆ ತಾಯಿಯ ದರ್ಶನ, ೯.೩೦ ಗಂಟೆಗೆ ದೀಪೋತ್ಸವ ಆರಂಭವಾಗಲಿದೆ. ಅಂದು ಗ್ರಹದೋಷ ಪರಿಹಾರ ಮಾಡಲು ಭಕ್ತರು ೧೦೮ ಎಳ್ಳುಬತ್ತಿಯನ್ನು ಹಚ್ಚುತ್ತಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಭಕ್ತಾದಿ ಚುಮ್ಮಿದೇವಯ್ಯ ಮಾತನಾಡಿ, ರಾಜರಾಜೇಶ್ವರಿ ದೇವಿಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಅಂದು ಗ್ರಹದೋಷವಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಸಚ್ಚಿನ್, ದೇವರಾಜು, ಭಕ್ತರಾದ ಹರೀಶ್, ಕಿಶಾನ್ ಪೂವಯ್ಯ ಉಪಸ್ಥಿತರಿದ್ದರು.