ಬೈಲಹೊಂಗಲ: ವೀರಕೇಸರಿ ಅಮಟೂರು ಬಾಳಪ್ಪ ಶೌರ್ಯ, ಪರಾಕ್ರಮವು ಕಿತ್ತೂರು ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದ್ದು, ಅವರಿಗೆ ಸಿಗಬೇಕಾದ ಗೌರವ ಮತ್ತು ಪ್ರಚಾರ ಸಿಗದೆ ಇರುವುದು ವಿಪರ್ಯಾಸದ ಸಂಗತಿ ಎಂದು ಬೇವಿನಕೊಪ್ಪ ಆನಂದಾಶ್ರಮದ ವಿಜಯಾನಂದ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಅಮಟೂರು ಗ್ರಾಮದಲ್ಲಿ ಜಿಲ್ಲಾಡಳಿತ, ತಾಲೂಕಾಡಳಿತ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ, ವೀರಕೇಸರಿ ಅಮಟೂರು ಬಾಳಪ್ಪ ಟ್ರಸ್ಟ್ ಕಮಿಟಿ ಆಶ್ರಯದಲ್ಲಿ ವೀರಕೇಸರಿ ಅಮಟೂರು ಬಾಳಪ್ಪ ಉತ್ಸವ ನಿಮಿತ್ತ ಬುಧವಾರ ಆಯೋಜಿಸಿದ್ದ ಭಾವಚಿತ್ರ ಮೆರವಣಿಗೆಯಲ್ಲಿ ಮಾತನಾಡಿದರು. ಬ್ರಿಟಿಷ ಕಲೆಕ್ಟರ್ ಥ್ಯಾಕರೆ ಎದೆಗೆ ಗುಂಡಿಟ್ಟು ಕಿತ್ತೂರು ರಾಣಿ ಚನ್ನಮ್ಮಳನ್ನು ರಸಿ, ಗೆಲುವು ತಂದು ಕೊಟ್ಟ ವೀರಕೇಸರಿ ಅಮಟೂರ ಬಾಳಪ್ಪ ಸಾಹಸ ಯುವಜನತೆಗೆ ಮಾದರಿಯಾಗಿದೆ. ಸರ್ಕಾರದಿಂದ ಉತ್ಸವ ಆಚರಿಸುತ್ತಿರುವುದು ಹೆಮ್ಮೆಯ ವಿಚಾರ. ಮುಂದಿನ ದಿನಮಾನಗಳಲ್ಲಿ ಅದ್ದೂರಿಯಾಗಿ ಆಯೋಜಿಸಲು ಮುಂದಾಗಬೇಕೆಂದರು.
ಶಾಸಕ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ ಮಾತನಾಡಿ, ಸ್ವಾತಂತ್ರ್ಯ ಸೇನಾನಿ ವೀರಕೇಸರಿ ಅಮಟೂರು ಬಾಳಪ್ಪ ತ್ಯಾಗ, ಬಲಿದಾನ ಸ್ಮರಣೆ ಅವಶ್ಯ. ಉತ್ಸವ ಆಚರಣೆಯಿಂದ ವೀರರ ಜೀವನ ಚರಿತ್ರೆ ಅರಿಯಲು ಸಾಧ್ಯ. ಅಮಟೂರು ಬಾಳಪ್ಪ ಉತ್ಸವ ಅದ್ದೂರಿಯಾಗಿ ಆಚರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಮೆರವಣಿಗೆ: ಉತ್ಸವ ನಿಮಿತ್ತ ಗ್ರಾಮದ ಸರ್ಕಾರಿ ಕನ್ನಡ ಶಾಲೆ ಪಕ್ಕದಲ್ಲಿರುವ ಅಮಟೂರ ಬಾಳಪ್ಪ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಿಸಲಾಯಿತು. ಭಾವಚಿತ್ರದ ಮೆರವಣಿಗೆಯಲ್ಲಿ ಸಕಲ ವಾದ್ಯಮೇಳಗಳೊಂದಿಗೆ ಕಲಾ ತಂಡಗಳು, ಗ್ರಾಮಸ್ಥರು, ವಿದ್ಯಾರ್ಥಿಗಳು ಜತೆಯಾಗಿ ಜಯೂಷ ಮೊಳಗಿಸಿದರು. ತಹಸೀಲ್ದಾರ್ ಹನುಮಂತ ಶಿರಹಟ್ಟಿ, ಬಿಇಒ ಎ.ಎನ್. ಪ್ಯಾಟಿ, ಬಾಳಪ್ಪ ಟ್ರಸ್ಟ್ ಕಮಿಟಿ ಅಧ್ಯ ಸೋಮನಗೌಡ ಪಾಟೀಲ, ಗ್ರಾಪಂ ಅಧ್ಯ ಮಹಾಂತೇಶ ಮರೆಕ್ಕನವರ, ನಾರಾಯಣ ಶಿರೋಮಣಿ, ಕಂದಾಯ ನಿರೀಕ ಬಸವರಾಜ ಬೋರಗಲ, ಅನಿಲ ಮ್ಯಾಕಲಮರಡಿ, ಈರಣಗೌಡ ಪಾಟೀಲ, ಮಲ್ಲಯ್ಯ ಹಿರೇಮಠ, ವೀರನಗೌಡ ಪಾಟೀಲ, ಪಾರೀಸಪ್ಪ ಭಾವಿ, ಶರತಗೌಡ ಪಾಟೀಲ, ಮಂಜುಳಾ ಮುದಕೆಯನವರ, ಡಾ.ಮಹಾಂತೇಶ ಕಳ್ಳಿಬಡ್ಡಿ ಇತರರಿದ್ದರು.