ಜಿಲ್ಲೆ

ಅಮೆಚೂರ್ ಬಾಡಿ ಬಿಲ್ಡರ್ ಸಂಸ್ಥೆ ಕರಾಟೆಪಟುಗಳ ಸಾಧನೆ

ಪ್ರಸಿನ್ ಕೆ.ಆರ್

ಹಾಸನ: ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ಸತ್ಯವೇದುನಲ್ಲಿ ದಿಲ್ಲಿ ನ್ಯಾಷನಲ್ ಕರಾಟೆ ಸ್ಪೋರ್ಟ್ಸ್ ಆರ್ಗನೈಜೇಷನ್ ಇಂಡಿಯಾದ ವತಿಯಿಂದ ಇತ್ತೀಚೆಗೆ ನಡೆದ ಪ್ರಥಮ ರಾಷ್ಟ್ರ ಮಟ್ಟದ ಕರಾಟೆ ಪಂದ್ಯದಲ್ಲಿ ಹಾಸನ ಜಿಲ್ಲೆಯ ಕರಾಟೆಪಟುಗಳು ಸಾಧನೆ ಮಾಡಿದ್ದಾರೆ.

ಹಾಸನದ ಮಹಾರಾಜ ಪಾರ್ಕ್‌ನ ಅಮೆಚೂರ್ ಬಾಡಿಬಿಲ್ಡರ್ ಸಂಸ್ಥೆಯ ಕರಾಟೆಪಟುಗಳು ಕತಾ ಹಾಗೂ ಕುಮಿತೆಯಲ್ಲಿ ಪ್ರಥಮ ಹಾಗೂ ದ್ವೀತಿಯ ಸ್ಥಾನ ಪಡೆದಿದ್ದಾರೆ. ಬಿ.ವಿ.ಆರ್ಯನ್ ಪ್ರಥಮ, ಹರ್ಷಿತ್ ಗೌಡ ಪ್ರಥಮ, ತೇಜಸ್ ಕೆ.ಪಿ.ಪ್ರಥಮ, ಜಯಂತ್ ಗೌಡ ದ್ವಿತೀಯ, ಎಂ.ಸುಹಾಸ್ ದ್ವಿತೀಯ, ಧನುಷ್ ದ್ವಿತೀಯ, ಎಚ್.ವಿ.ದಶ್ವಂತ್ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಸಂಸ್ಥೆಯ ಅಧ್ಯಕ್ಷ ಶರತ್ ಚಂದ್ರ, ಪದಾಧಿಕಾರಿಗಳು, ಪಾಲಕರು ಅಭಿನಂದಿಸಿದ್ದಾರೆ. ಹಿರಿಯ ತರಬೇತುದಾರ ಎಸ್.ಮಹದೇವ ತರಬೇತಿ ನೀಡಿದ್ದಾರೆ.