ಜಿಲ್ಲೆ

ನೀರು, ಬೀದಿದೀಪ, ಚರಂಡಿ ಯಾವುದೂ ಇಲ್ಲ, ಸೌಲಭ್ಯ ವಂಚಿತ ಅಮರಗೋಳ ಕೆಎಚ್ ಬಿ ಕಾಲನಿ

Dharwada - Basavaraj Idli
  • ಹುಬ್ಬಳ್ಳಿ: ಇಲ್ಲಿಯ ಅಮರಗೋಳದಲ್ಲಿ ಕರ್ನಾಟಕ ಗೃಹ ಮಂಡಳಿಯು ನಿಮಿರ್ಸಿರುವ 2ನೇ ಹಂತದ ಬಡಾವಣೆಯು ಯಾವುದೇ ಸೌಲಭ್ಯಗಳಿಲ್ಲದೇ ನಿವಾಸಿಗಳು ಪರದಾಡುವಂತಾಗಿದೆ.
  • ದಶಕಗಳಿಂದ ಇಲ್ಲಿ ಮನೆ ನಿಮಿರ್ಸಿಕೊಂಡು ಬದುಕು ಸಾಗಿಸುತ್ತಿರುವ ಜನರು ಕನಿಷ್ಠ ಪಕ್ಷ ಸಮರ್ಪಕ ರಸ್ತೆ, ಕಡಿಯುವ ನೀರು ಸಹ ಇಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ.
  • ಕರ್ನಾಟಕ ಗೃಹ ಮಂಡಳಿಯು ಈ ಬಡಾವಣೆಯನ್ನು ಸೌಲಭ್ಯಗಳಿಲ್ಲದೇ ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಲು ಮುಂದಾಗಿದೆ. ಆದರೆ, ಮಹಾನಗರ ಪಾಲಿಕೆ ಅಧಿಕಾರಿಗಳು ವಿವಿಧ ಕಾರಣಗಳನ್ನು ನೀಡಿ ಇದುವರೆಗೂ ಹಸ್ತಾಂತರ ಮಾಡಿಕೊಂಡಿಲ್ಲ.
  • ಹೀಗಾಗಿ ಎರಡು ಇಲಾಖೆಗಳ ಮಧ್ಯದ ಗೊಂದಲದಿಂದಾಗಿ ಜನರು ಹೈರಾಣಾಗಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಬರೀ ಭರವಸೆಗಳು ಸಿಕ್ಕಿವೆ. ಉತ್ತಮ ರಸ್ತೆ, ಬೀದಿದೀಪ ವ್ಯವಸ್ಥೆ, ಕುಡಿಯುವ ನೀರು ಪೂರೈಕೆ ಆಗಲೇ ಇಲ್ಲ ಎಂದು ಸ್ಥಳಿಯರು ದೂರಿದ್ದಾರೆ.
  • ವಸತಿ ಸಚಿವ ಜಮೀರ್ ಅಹ್ಮದ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಕೆಎಚ್ಬಿ ಎರಡನೇ ಹಂತದ ನಿವಾಸಿಗಳು ಮನವಿ ಸಲ್ಲಿಸಿದ್ದಾರೆ. ತಾವು ಅನುಭವಿಸುತ್ತಿರುವ ಯಾತನೆ ವಿವರಿಸಿದ್ದಾರೆ.
  • ನೀರು ಸರಿ ಇಲ್ಲ: ಜಲಮಂಡಳಿಯವರು ಓವರ್ ಹೆಡ್ ಟ್ಯಾಂಕ್ನಿಂದ ನೀರು ಪೂರೈಸುತ್ತಿಲ್ಲ. ಹಳೆಯ ಪೈಪ್ಲೈನ್ಗಳು ಕಸ ತುಂಬಿಕೊಂಡಿದ್ದು, ನೀರು ಬಂದಾಗ ಮಲೀನವಾಗಿರುತ್ತವೆ. ಓವರ್ಹೆಡ್ ಟ್ಯಾಂಕ್ ಪಾಚಿಗಟ್ಟಿದ್ದು, ಕಲುಷಿತ ನೀರು ಕುಡಿದು ಆರೋಗ್ಯ ಹಾಳಾಗುತ್ತಿದೆ.
  • ಒಳಚರಂಡಿ ಪೈಪ್ಲೈನ್ಗಳು ಸರಿಯಾಗಿಲ್ಲ. ಆಗಾಗ ತುಂಬಿಕೊಂಡು ರಸ್ತೆಗಳು ಕೊಳಚೆಮಯವಾಗುತ್ತವೆ. ಜಡ್ಜ್ ಕ್ವಾಟರ್ಸ್ ಮುಂದಿನ ಮುಖ್ಯ ರಸ್ತೆ ಸಂರ್ಪೂಣ ಹಾಳಾಗಿದ್ದು, ತಗ್ಗು ದಿನ್ನೆಗಳಿಂದ ಕೂಡಿದೆ. ಬೀದಿದೀಪಗಳು ಇಲ್ಲಿಲ್ಲ.
  • ಜಂಗಲ್: ರಸ್ತೆ ಬದಿಯಲ್ಲಿ ಗಿಡಗಂಟಿಗಳು ಬೆಳೆದು ಹುಳುಹುಪ್ಪಡಿಗಳ ತಾಣವಾಗಿವೆ. ಬಹಳಷ್ಟು ಜನರಿಗೆ ವಿಷಜಂತುಗಳ ದರ್ಶನವಾಗಿವೆ. ಕೆಲವರು ಅಪಾಯವನ್ನೂ ಎದುರಿಸಿದ್ದಾರೆ. ಬೀದಿ ದೀಪಗಳು ಇಲ್ಲದ ಕಾರಣ ರಾತ್ರಿ ಸಂಚರಿಸುವುದು ಕಷ್ಟಕರವಾಗಿದೆ.
  • ಕೆಎಚ್ಬಿ ಅಧಿಕಾರಿಗಳು ಸರಿಯಾದ ಗಡಿ ಗುರುತಿಸದ ಕಾರಣ ಎಂಐಜಿ ವಿಭಾಗದ ಮನೆಗಳಿಗೆ ಕಂಪೌಂಡ್ ನಿಮಿರ್ಸುವುದು ಸಾಧ್ಯವಾಗಿಲ್ಲ. ಇದರಿಂದ ಹಂದಿ ನಾಯಿಗಳು ಮನೆಯೊಳಗೆ ಬರುವಂತಾಗಿದೆ.
    ಕಂಪೌಂಡ್ ಕಟ್ಟಲು ಪಕ್ಕದ ಜಮೀನಿನ ಮಾಲೀಕರು ಬಿಡುತ್ತಿಲ್ಲ. ಅಳತೆ ಸರಿಯಾಗಿಲ್ಲ ಎಂದು ತಗಾದೆ ತೆಗೆಯುತ್ತಿದ್ದಾರೆ ಎಂದು ಸ್ಥಳಿಯರು ದೂರಿದ್ದಾರೆ.
  • ಇಂತಹ ಹತ್ತಾರು ಸಮಸ್ಯೆಗಳನ್ನು ಕೆಎಚ್ಬಿ 2ನೇ ಹಂತದ ನಿವಾಸಿಗಳು ಎದುರಿಸುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಪರಿಹಾರ ನೀಡಬೇಕೆಂದು ವಸತಿ ಸಚಿವ ಜಮೀರ್ ಅಹ್ಮದ ಅವರಿಗೆ ನಿವಾಸಿಗಳ ಹಿತಾಭಿವೃದ್ಧಿ ಸಂದ ಅಧ್ಯಕ್ಷ ಡಾ. ಶರಣಬಸಪ್ಪ ರೋಣ, ಉಪಾಧ್ಯಕ್ಷ ಸುಭಾಸ ನಾಯನೇಗಲಿ, ಸುಭಾಸ ಚವಾಣ, ಕಾರ್ಯದಶಿರ್ ಮೃತ್ಯುಂಜಯ ಮಟ್ಟಿ ಮನವಿ ಮಾಡಿದ್ದಾರೆ.