ಎಂ.ಅಮರೇಶ 
ಜಿಲ್ಲೆ

ಜನಜಾಗೃತಿ ವೇದಿಕೆ ಅಧ್ಯಕ್ಷರಾಗಿ ಅಮರೇಶ ಆಯ್ಕೆ

ಮಸ್ಕಿ: ಸಿರವಾರದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾಗಿ ಪಟ್ಟಣದ ಪುರಸಭೆ ಮಾಜಿ ಸದಸ್ಯ ಎಂ.ಅಮರೇಶ, ಉಪಾಧ್ಯಕ್ಷರಾಗಿ ಮುದಗಲ್‌ನ ತೋಟಮ್ಮ ಹಾಗೂ ಖಜಾಂಚಿಯಾಗಿ ಸಿರವಾರದ ಅಯ್ಯನಗೌಡ ಆಯ್ಕೆಯಾಗಿದ್ದಾರೆ.

ದುಶ್ಚಟ ಬಿಡಿಸುವುದು, ವ್ಯಸನ ಮುಕ್ತ ಸಮಾಜ ನಿರ್ಮಾಣ, ಸಮಾಜದ ಅನಿಷ್ಟಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ವೇದಿಕೆಯ ಉದ್ದೇಶವಾಗಿದೆ ಎಂದು ಬಿ.ಸಿ.ಟ್ರಸ್ಟ್ ಜಿಲ್ಲಾ ಯೋಜನಾಧಿಕಾರಿ ಮೋಹನ್ ನಾಯ್ಕ ತಿಳಿಸಿದ್ದಾರೆ. ಸಭೆಯಲ್ಲಿ ಮಸ್ಕಿ ತಾಲೂಕು ಯೋಜನಾಧಿಕಾರಿ ಶಾಲಿನಿ ಇತರರಿದ್ದರು.