ಗುಳೇದಗುಡ್ಡ ತಾಲೂಕು ಆಡಳಿತದಿಂದ ಅಮರಶಿಲ್ಪಿ ಜಕಣಾಚಾರಿ ಜಯಂತಿ ಕಾರ್ಯಕ್ರಮ ನಡೆಯಿತು. ಅಂಖಂಡೇಶ್ವರ ಎಂ. ಪತ್ತಾರ, ಪಟ್ಟಣದ ಯುವಕ ವಿಠ್ಠಲ ಕೊಟ್ಟಲಗಿ, ವಕೀಲ ಪುಂಡಲೀಕ ಬಡಿಗೇರ, ವಿಶೇಷ ತಹಸೀಲ್ದಾರ್ ಮಹೇಶ ಗಸ್ತೆ, ಉಪತಹಸೀಲ್ದಾರ್ ಜಿ.ವಿ. ರಜಪೂತ, ಎಂ.ಎಂ. ತುಪ್ಪದ ಇತರರಿದ್ದರು. 
ಜಿಲ್ಲೆ

ಶಿಲ್ಪಕಲೆಗೆ ಅಮರಶಿಲ್ಪಿ ಜಕಣಾಚಾರಿ ಕೊಡುಗೆ ಅಪಾರ

ಗುಳೇದಗುಡ್ಡ: ದೇಶದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು, ಸಾರ್ವಜನಿಕರು ಮತ್ತು ಅಧಿಕಾರಿಗಳು ಶ್ರಮಿಸುವುದು ಅಗತ್ಯವಾಗಿದೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮಾಜಿ ಸದಸ್ಯ ಅಂಖಂಡೇಶ್ವರ ಎಂ. ಪತ್ತಾರ ಹೇಳಿದರು.

ಗುಳೇದಗುಡ್ಡ ತಾಲೂಕು ಆಡಳಿತ ಹಾಗೂ ತಾಲೂಕು ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜ ಸಂಘದ ಸಹಯೋಗದಲ್ಲಿ ಬುಧವಾರ ನಡೆದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚಣೆ ಮಾಡಿ ಮಾತನಾಡಿದರು.

ಜಗತ್ತಿನ ಪ್ರವಾಸಿ ತಾಣಗಳ ಬೆಳವಣಿಗೆಗೆ ಅಮರಶಿಲ್ಪಿ ಜಕಣಾಚಾರ್ಯರ ಕೊಡುಗೆ ಅಪಾರವಾಗಿದೆ ಎಂದರು.

ಪಟ್ಟಣದ ಯುವಕ ವಿಠ್ಠಲ ಕೊಟ್ಟಲಗಿ, ವಕೀಲ ಪುಂಡಲೀಕ ಬಡಿಗೇರ ಮಾತನಾಡಿದರು. ತಹಸೀಲ್ದಾರ್ ಮಂಗಳಾ ಎಂ. ಅಧ್ಯಕ್ಷತೆ ವಹಿಸಿದ್ದರು.

ವಿಶೇಷ ತಹಸೀಲ್ದಾರ್ ಮಹೇಶ ಗಸ್ತೆ, ಉಪತಹಸೀಲ್ದಾರ್ ಜಿ.ವಿ. ರಜಪೂತ, ಎಂ.ಎಂ. ತುಪ್ಪದ, ತಾಲೂಕು ಸಂಘದ ಅಧ್ಯಕ್ಷ ಚಂದ್ರಶೇಖರ ಬಡಿಗೇರ, ಪಟ್ಟಣದ ಕಾಳಿಕಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ಮನೋಹರ ಪತ್ತಾರ, ಸುಭಾಸ್ ಬಡಿಗೇರ, ಯಮನಪ್ಪ ಬಡಿಗೇರ, ರಾಜು ಪತ್ತಾರ, ಉಪಾಧ್ಯಕ್ಷ ಮಾನಪ್ಪ ಬಡಿಗೇರ, ಲಚ್ಚಪ್ಪ ಕಂಬಾರ, ಈರಪ್ಪ ಬಡಿಗೇರ, ತಿಪ್ಪಣ್ಣ ಬಡಿಗೇರ, ಚಿದಾನಂದ ಬಡಿಗೇರ, ಬಸವರಾಜ ಬಡಿಗೇರ, ರಂಗನಾಥ ಬಡಿಗೇರ, ಕಾಳಪ್ಪ ಬಡಿಗೇರ, ಭೀಮಸಿ ಬಡಿಗೇರ, ಸಂಗಪ್ಪ ಬಡಿಗೇರ, ಎಸ್.ಪಿ ದ್ಯಾಮಣ್ಣ ಬಡಿಗೇರ, ಐ.ಎ. ಬಡಿಗೇರ, ವೈ.ಎಸ್. ಬಡಿಗೇರ, ಎ.ಎಂ. ಬಡಿಗೇರ, ರಾಚಪ್ಪ ಬಡಿಗೇರ ಇತರರಿದ್ದರು.