ಜಿಲ್ಲೆ

ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಪದಾಧಿಕಾರಿಗಳ ಪದಗ್ರಹಣ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಬೆಳ್ತಂಗಡಿ ತಾಲೂಕು ಪದಗ್ರಹಣ ಕಾರ್ಯಕ್ರಮ ಉಜಿರೆಯಲ್ಲಿ ನಡೆಯಿತು. ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ.ಸುವರ್ಣ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿದರು. ಬೆಳ್ತಂಗಡಿ ತಾಲೂಕು ಜಾನಪದ ಪರಿಷತ್ ಗೌರವಾಧ್ಯಕ್ಷ ಬಿ.ಭುಜಬಲಿ, ಬೆಳ್ತಂಗಡಿ ತಾಲೂಕು ಆಮಂತ್ರಣ ವೇದಿಕೆ ಅಧ್ಯಕ್ಷೆ ವಿದ್ಯಾಶ್ರೀ ಅಡೂರು ತಂಡಕ್ಕೆ ಪದಪ್ರದಾನ ಮಾಡಿದರು.

ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಕಿರಣ್ ಕಾರಂತ್, ಬಳಂಜ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಅಧ್ಯಕ್ಷ ಹರೀಶ್ ವೈ ಚಂದ್ರಮ ಮಾತನಾಡಿದರು. ಆಮಂತ್ರಣ ಪರಿವಾರ ಏರ್ಪಡಿಸಿದ್ದ ಮುದ್ದು ಮಗು ನೀ ನಗು ಫೋಟೋ ಸ್ಪರ್ಧೆಯ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಪ್ರಥಮ, ದ್ವೀತಿಯ, ತೃತೀಯ ಸ್ಥಾನ ಪಡೆದ 30 ಮಕ್ಕಳು ಮೆಚ್ಚುಗೆ ಹಾಗೂ ವಿಶೇಷ ಸ್ಥಾನ ಪಡೆದವರು ಭಾಗವಹಿಸಿದ್ದರು. ಆಮಂತ್ರಣ ರಾಜ್ಯ ಸದಸ್ಯರಾದ ಎಚ್ಕೆ ನಯನಾಡು ಅಧ್ಯಕ್ಷತೆಯಲ್ಲಿ ಪದಗ್ರಹಣ ಸಮಾರಂಭದ ಅಂಗವಾಗಿ ಕವಿಗೋಷ್ಠಿ ನಡೆಯಿತು.

ಆಮಂತ್ರಣ ಜಿಲ್ಲಾ ಅಧ್ಯಕ್ಷೆ ನಿರೀಕ್ಷಿತಾ, ಉಪಾಧ್ಯಕ್ಷೆ ವಿಂಧ್ಯಾ ಎಸ್ ರೈ ಕಡೇಶಿವಾಲಯ, ನಿರ್ದೇಶಕ ಚೇತನ್ ಕುಮಾರ್ ಅಮೈ, ಬಂಟ್ವಾಳ ತಾಲೂಕು ಆಮಂತ್ರಣ ವೇದಿಕೆ ನೂತನ ಅಧ್ಯಕ್ಷೆ ರಶ್ಮಿತ ಸುರೇಶ್ ಜೋಗಿಬೆಟ್ಟು, ಮಡಂತ್ಯಾರು ಗ್ರಾ.ಪಂ.ಅಧ್ಯಕ್ಷೆ ರೂಪ, ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀದೇವಿ ಸಚಿನ್, ಧನರಾಜ ಆಚಾರ್ಯ ಬೆಳ್ತಂಗಡಿ, ಪ್ರಕಾಶ್ ಶೆಟ್ಟಿ ಧರ್ಮಸ್ಥಳ, ಪ್ರಾಯೋಜಕರಾದ ಕಲಾಪ್ರತಿಭೆ ತಂಡದ ಪ್ರಕಾಶ್ ಆಚಾರ್ಯ, ವಿಜಯಚಂದ್ರ ಮುಂಡ್ಲಿ, ಮೂಡುಬಿದಿರೆ ನ್ಯೂ ಫ್ಯಾಷನ್ ಪಾಯಿಂಟ್ ಮಾಲಕಿ ಸುಶ್ಮಿತಾ ಭಾಗವಹಿಸಿದ್ದರು.

ಆಮಂತ್ರಣ ರಾಜ್ಯ ಸದಸ್ಯೆ ಉಮಾ ಸುನಿಲ್ ಹಾಸನ ಸ್ವಾಗತಿಸಿದರು.ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಅಳದಂಗಡಿ ಪ್ರಸ್ತಾವಿಸಿದರು. ಬಹುಮಾನ ವಿಜೇತರ ಪಟ್ಟಿಯನ್ನು ಆಮಂತ್ರಣ ರಾಜ್ಯ ಸದಸ್ಯೆ ಸ್ವಾತಿ ಸೂರಜ್ ಶಿಶಿಲ ಓದಿದರು. ಆಮಂತ್ರಣ ರಾಜ್ಯ ಸದಸ್ಯೆ ಆಶಾ ಅಡೂರು ವಂದಿಸಿದರು. ಶ್ವೇತಾ ಗೋಡ್‌ಬೋಲೆ ಕನ್ಯಾಡಿ ಕಾರ್ಯಕ್ರಮ ನಿರೂಪಿಸಿದರು. ರೇಣುಕಾ ಸುಧೀರ್ ಅರಸಿನ ಮಕ್ಕಿ ಕವಿಗೋಷ್ಠಿಯ ಕಾರ್ಯಕ್ರಮ ನಿರೂಪಿಸಿದರು. ಆಮಂತ್ರಣ ತಾಲೂಕು ಕೋಶಾಧಿಕಾರಿ ನಿರೀಕ್ಷಾ ನಂದಿಬೆಟ್ಟ ವಂದಿಸಿದರು.