ಹೊಳೆನರಸೀಪುರ: ನನ್ನ ಉಸಿರು ಇರುವವರೆಗೂ ಕಾಂಗ್ರೆಸ್ ಮತ್ತು ಕಾರ್ಯಕರ್ತರಿಗಾಗಿ ಹಗಲಿರುಳು ಶ್ರಮಿಸುತ್ತೇನೆ ಎಂದು ಹಾಸನ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಎಂ.ಪಟೇಲ್ ತಿಳಿಸಿದರು.
ತಾಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ತಾವೆಲ್ಲರೂ ಆಶೀರ್ವಾದ ಮಾಡಿ ನನ್ನನ್ನು ಗೆಲ್ಲಿಸಿದರೆ ತಮ್ಮ ಸೇವಕನಾಗಿ ಹಾಗೂ ಗ್ರಾಮದ ಸಮಸ್ಯೆ, ಅಭಿವೃದ್ಧಿ ಕಾರ್ಯಗಳಿಗೆ ಪ್ರಾಮಾಣಿಕವಾಗಿ ದುಡಿಯುವುದಾಗಿ ಭರವಸೆ ನೀಡಿದರು.
ಕೆಪಿಸಿಸಿ ಸದಸ್ಯ ಎಂ.ಎಸ್.ಮಂಜೇಗೌಡ ಮಾತನಾಡಿ, ದಿವಂಗತ ಜಿ.ಪುಟ್ಟಸ್ವಾಮಿಗೌಡರ ಕುಟುಂಬದ ಕುಡಿಯಾದ ಶ್ರೇಯಸ್ ಎಂ. ಪಟೇಲ್ ಅವರನ್ನು ಅಹಿಂದ ಸೇರಿದಂತೆ ಎಲ್ಲ ವರ್ಗದವರು ಜಾತ್ಯತೀತ ಮತ್ತು ಪಕ್ಷಾತೀತವಾಗಿ ಕಾಂಗ್ರೆಸ್ ಗ್ಯಾರಂಟಿ ಕಾರ್ಯಕ್ರಮಗಳನ್ನು ನೆನಪು ಮಾಡಿಕೊಳ್ಳುವುದರ ಮೂಲಕ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಜೆಡಿಎಸ್ ಬೆಂಬಲಿಗರಾದ ಮಲ್ಲಪ್ಪನಹಳ್ಳಿ ಗ್ರಾಪಂ ಸದಸ್ಯರಾದ ತೆವಡಹಳ್ಳಿ ಗ್ರಾಮದ ಶಾಂತಮ್ಮ ಸಿದ್ದರಾಮಣ್ಣ, ಗೊಂದಿ ಮಲ್ಲೇನಹಳ್ಳಿ ಗ್ರಾಮದ ಸುಧಾ ರಮೇಶ್, ಎಸ್.ಅಂಕನಹಳ್ಳಿ ಗ್ರಾಮದ ಭಾರತಿ ಶ್ರೀಧರ್, ಬೀರನಹಳ್ಳಿ ಗ್ರಾಮದ ಯೋಗೇಶ್ ಅವರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಯಾದರು.
ಗ್ರಾಮದ ಯುವ ಮುಖಂಡ ಎಂ.ಸಿ.ಮೋಹನ್‌ಕುಮಾರ್ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ, ಶ್ರವಣೂರು ಗ್ರಾಪಂ ಅಧ್ಯಕ್ಷ ಮಹೇಂದ್ರ, ಶಾಂತವೀರಪ್ಪ, ಮಂಜುನಾಥ್, ಗ್ರಾಪಂ ಸದಸ್ಯ ವಿಜಯ್‌ಕುಮಾರ್, ಯೋಗೇಶ್, ರಾಜೇಗೌಡ, ಪುಟ್ಟಸ್ವಾಮಿಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಶಿವಕುಮಾರ್ ಇತರರು ಹಾಜರಿದ್ದರು. ಸ್ವಾಗತಿಸಿದರು.