ಕಾರ್ಗಿಲ್ ವಿಜಯ್ ದಿವಸ್ ನಿಮಿತ್ತ ಮಸ್ಕಿಯಲ್ಲಿ ಬಿಜೆಪಿ ಮಂಡಲದಿಂದ ಮಾಜಿ ಸೈನಿಕರಾದ ಶಂಕ್ರಪ್ಪ ಮತ್ತು ರಾಜಪ್ಪ ಮಜ್ಜಿಗೆ ಅವರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಶರಣಯ್ಯ ಸೊಪ್ಪಿಮಠ, ಡಾ.ಬಿ.ಎಚ್.ದಿವಟರ್ ಇತರರಿದ್ದರು. 
ಜಿಲ್ಲೆ

ಸೈನಿಕರ ಸೇವೆ, ತ್ಯಾಗ ಸದಾ ಸ್ಮರಿಸಿ

ಮಸ್ಕಿ: ಭಾರತೀಯ ಸೈನಿಕರ ಶಕ್ತಿ ಏನೆಂಬುದನ್ನು ಅವಕಾಶ ಸಿಕ್ಕಾಗಲೆಲ್ಲ ಜಗತ್ತಿಗೆ ತೋರಿಸಲಾಗಿದೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.

ಕಾರ್ಗಿಲ್ ವಿಜಯ್ ದಿವಸ್ ನಿಮಿತ್ತ ಇಲ್ಲಿನ ಪಭುವಿತಂ ಕಾಲೇಜಿನಲ್ಲಿ ಶನಿವಾರ ಬಿಜೆಪಿ ಮಂಡಲ ಏರ್ಪಡಿಸಿದ್ದ ಮಾಜಿ ಸೈನಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ದೇಶದ ಸೈನಿಕರ ತ್ಯಾಗ, ಬಲಿದಾನ ಮತ್ತು ಶಕ್ತಿಗಾಗಿ ನಾವು ಸದಾ ಸ್ಮರಿಸಬೇಕು ಎಂದರು. ಬಿಜೆಪಿ ಮಂಡಲ ಅಧ್ಯಕ್ಷ ಶರಣಯ್ಯ ಸೊಪ್ಪಿಮಠ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ನಮ್ಮ ಸೈನಿಕರು ಜೀವದ ಹಂಗು ತೊರೆದು ಶತ್ರುಗಳಿಗೆ ತಕ್ಕ ಉತ್ತರ ನೀಡುವ ಮೂಲಕ ಸಾಹಸ ಮೆರೆದರು ಎಂದು ತಿಳಿಸಿದರು. ಮಾಜಿ ಸೈನಿಕರಾದ ಶಂಕ್ರಪ್ಪ ಮತ್ತು ರಾಜಪ್ಪ ಮಜ್ಜಿಗೆ ಅವರನ್ನು ಸತ್ಕರಿಸಲಾಯಿತು.

ಬಿಜೆಪಿ ಹಿರಿಯ ಮುಖಂಡ ಡಾ.ಬಿ.ಎಚ್.ದಿವಟರ್, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಶಿವರಾಜ ಹರಸೂರು, ಕಿರಣ್ ಕುಮಾರ, ದೇವರಾಜ, ಮಾಳಪ್ಪ, ಗಂಗಾಧರ ಕಂಬಾಳಿಮಠ, ಮಲ್ಲಿಕಾರ್ಜುನ ಗೋನಾಳ, ಶರಣಗೌಡ ಪೊಲೀಸ್ ಪಾಟೀಲ್ ಭಾಗವಹಿಸಿದ್ದರು.