ವಿಜಯಪುರ ಗುರುದೇವ ನಗರದಲ್ಲಿರುವ ಮೆ. ಗುರುದೇವ ರೆಜಿನ್​ ಇಂಡಸ್ಟ್ರೀಯಲ್​ ಪ್ರೊಸೆಸಿಂಗ್​ ಫ್ರಿಜರ್​ವೇಶನ್​ (ಗ್ಟ್​ಿ ಕ್ಲಸ್ಟರ್​)ನ ಆವರಣದಲ್ಲಿ ಹಮ್ಮಿಕೊಂಡಿದ್ದ ಸಿದ್ಧೇಶ್ವರ ಶ್ರೀಗಳ ಗುರುವಂದನೆ ಕಾರ್ಯಕ್ರಮದಲ್ಲಿ ಮೇಘಾಲಯ ರಾಜ್ಯಪಾಲ ಸಿ.ಎಚ್​. ವಿಜಯಶಂಕರ ಅವರು ಸಾಧಕ ಪ್ರಶಸ್ತಿಯನ್ನು ವಿಠ್ಠಲಗೌಡ ಬಿರಾದಾರ ಅವರಿಗೆ ಪ್ರದಾನಮಾಡಿದರು. ಗುರುಶಾಂತ ಶಿವಾಚಾರ್ಯರು, ರಮೇಶ ಜಿಗಜಣಗಿ, ಶಂಕರಗೌಡ ಪಾಟೀಲ ಇದ್ದಾರೆ. 
ಜಿಲ್ಲೆ

ರೈತರ ಸಹಕಾರಕ್ಕೆ ಸದಾ ಸಿದ್ಧ

ಗಿರೀಶ ಸಗರ

ವಿಜಯಪುರ: ರೈತರ ಎಲ್ಲಾ ಸಮಗ್ರ ವಾಣಿಜ್ಯ ಬೆಳೆಗಳ ರ್ತು ವಿಚಾರವಾಗಿ ಅಥವಾ ಬೇರಾವುದೇ ವಿಷಯಗಳಿಗೆ ಕೇಂದ್ರ ಸರ್ಕಾರದಿಂದ ಯಾವುದೇ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಎಲ್ಲ ಸಂಸದರ ಜೊತೆಗೆ ನಿಂತು ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಪ್ರಾಮಾಣಿಕವಾಗಿ ಸಹಕರಿಸುವೆ ಎಂದು ಮೇಘಾಲಯ ರಾಜ್ಯಪಾಲ ಸಿ.ಎಚ್​. ವಿಜಯಶಂಕರ ಆಶ್ವಾಸನೆ ನೀಡಿದರು.

ನಗರದ ಹೊರವಲಯದ ಗುರುದೇವ ನಗರದಲ್ಲಿರುವ ಮೆ. ಗುರುದೇವ ರೆಜಿನ್​ ಇಂಡಸ್ಟ್ರೀಯಲ್​ ಪ್ರೋಸೆಸಿಂಗ್​ ಫ್ರಿಜರ್​ವೇಶನ್​ (ಗ್ಟ್​ಿ ಕ್ಲಸ್ಟರ್​)ನ ಆವರಣದಲ್ಲಿ ಸಿಎ್​ಸಿ ಸದಸ್ಯರು, ಕರ್ನಾಟಕ&ಮಹಾರಾಷ್ಟ್ರದ ಎಂಎಸ್​ಎಂಇ ಉದ್ದಿಮೆದಾರರು, ದ್ರಾ ಬೆಳೆಗಾರರಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಿದ್ಧೇಶ್ವರ ಶ್ರೀಗಳ ಎರಡನೇ ವರ್ಷದ ಗುರುನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

1994ರಲ್ಲಿ ಸದನದಲ್ಲಿ ಸಬ್ಜಕ್ಟ್​ ಕಮಿಟಿ ಸದಸ್ಯನಾಗಿ ರೈತರ ಭೂಮಿಯ ಜೊತೆಯಲ್ಲಿ ರೈತನಿಗೂ ರಕ್ಷಣೆ ಬೇಕು ಎಂಬ ಮಸೂದೆಯನ್ನು ಮಂಡಿಸಿದ್ದೆ. 1998ರಲ್ಲಿ ಅಟಲ್​ ಬಿಹಾರಿ ವಾಜಪೇಯಿ ಪ್ರಧಾನಮಂತ್ರಿಯಾಗಿದ್ದಾಗ, ನಾನು ಹಾಗೂ ಸಂಸದ ರಮೇಶ ಜಿಗಜಿಣಗಿ ಕೂಡಿ ಇಬ್ಬರೂ ಕೆಲಸ ಮಾಡಿದ್ದೇವೆ ಎಂದ ರಾಜ್ಯಪಾಲರು, ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಉಳುವವನೇ ಭೂಮಿಯ ಒಡೆಯನಾಗಬೇಕು ಎಂಬ ಕಾಯ್ದೆ ಜಾರಿಗೆ ಬಂದಾಗ ನಾನು ಅದರ ಜೊತೆಯಲ್ಲಿ ನಾಲ್ಕು ವಿಷಯಗಳನ್ನು ಮಂಡಿಸಿದ್ದೆ. ಭೂಮಿಯನ್ನು ನೀರಾವರಿಗೆ ಒಳಪಟ್ಟ ಭೂಮಿ, ತೋಟಗಾರಿಕೆ ಬೆಳೆಗಳಿಗೆ ಒಳಪಟ್ಟ ಭೂಮಿ, ಲವತ್ತತೆಯಾದ ಭೂಮಿ, ಒಣ ಬೇಸಾಯಿ ಭೂಮಿ ಎಂದು ವಿಂಗಡಿಸಿದ್ದೆ. ಮಸೂದೆಯಲ್ಲಿ ಕೃಷಿಯಿಂದ ಕೃಷಿಯೇತರ ಭೂಮಿಯಾಗಿ ಮಾರ್ಪಡಿಸಬೇಕಾದರೆ ಮೊದಲು ಒಣ ಬೇಸಾಯದ ಭೂಮಿಗೆ ಹಾಗೂ ನಂತರ ಕಡಿಮೆ ಬಿದ್ದಲ್ಲಿ ಮಾತ್ರವೇ ಲವತ್ತತೆಯ ಭೂಮಿಯನ್ನು ಬಳಸಬೇಕು.

ಯಾವುದೇ ಕಾರಣಕ್ಕೂ ನೀರಾವರಿ, ತೋಟಗಾರಿಕೆ ಬೆಳೆಗಳ ಭೂಮಿಯನ್ನು ಬಳಸಬಾರದು ಎಂದು ಹೇಳಿದ್ದೆ ಎಂದು ಕೃಷಿಗೆ ಆದ್ಯತೆ ನೀಡಿ ತಾವು ನೀಡಿದ್ದ ಕ್ಷಣಗಳನ್ನು ನೆನಪಿಸಿಕೊಂಡರು.

ಕೃಷಿಯಿಂದ ವಿಮುಖರಾಗುತ್ತಿರುವ ಸಮಯದಲ್ಲಿ ವಿಠ್ಠಲಗೌಡ ಬಿರಾದಾರ ಅವರು ಜಿಲ್ಲೆಯ ದ್ರಾ ಬೆಳೆಗಾರರು, ಉದ್ದಿಮೆದಾರರನ್ನು ಕಾಪಾಡುವುದಕ್ಕೋಸ್ಕರ ಗುರುದೇವಪುರದಲ್ಲಿ ಗುರುದೇವ ಕೋಲ್ಡ್​ ಸ್ಟೋರೇಜ್​ ಆರಂಭಿಸಿ ವಿಜಯಪುರದ ಒಣದ್ರಾಯನ್ನು ವಿದೇಶಕ್ಕೆ ರ್ತು ಮಾಡುವ ಸಾಹಸವನ್ನು ಮಾಡಿ ಯಶಸ್ವಿಯಾಗಿದ್ದಾರೆ. ಇದು ಉತ್ತರೋತ್ತರ ಅಭಿವೃದ್ಧಿಯಾಗಿ ಇನ್ನೂ ಹೆಚ್ಚಿನ ಸಾಧನೆ ಮೆರೆಯಲಿ ಎಂದು ಶುಭ ಹಾರೈಸಿದರು.

ವಿಆರ್​ಬಿ ಸಮೂಹ ಸಂಸ್ಥೆಗಳ ಅಧ್ಯಕ್ಷ ವಿಠ್ಠಲಗೌಡ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ, ವಿಜಯಪುರ ಭಾಗದಲ್ಲಿ ಬೆಳೆಯುವ ಉತ್ಕಷ್ಟ ದರ್ಜೆಯ ದ್ರಾಯನ್ನು ರಾಜ್ಯ ಸರ್ಕಾರದ ಕೆಪೆಕ್​ ರ್ತು ಇಲಾಖೆ ಸಂಸ್ಥೆಯಿಂದ ಯೂರೋಪ್​ ಮಾರುಕಟ್ಟೆಗೆ ಎರಡು ಕಂಟೇನರ್​ಗಳಲ್ಲಿ ರ್ತು ಮಾಡುತ್ತಿದ್ದು ಅದರಲ್ಲಿ ಪ್ರತಿಶತ 95ರಷ್ಟು ನಮ್ಮಲ್ಲಿಯದ್ದು ಎಂದ ಅವರು, ಅಮೆರಿಕಾದ ಕಾಡುತಳಿ ಡ್ರಾಗೇಜ್​ ರೂಟ್​ ಸ್ಟಾಕ್​ ಸಸಿಯನ್ನು ಐಐಎಚ್​ಆರ್​ನಿಂದ ಪಡೆದು ನಮ್ಮ ಪ್ರಯೋಗಾಲಯದಲ್ಲಿ ಪ್ರಾಯೋಗಿಕವಾಗಿ ಬೆಳೆಸಿ, ನಂತರ ಅದನ್ನು ಸುತ್ತಲಿನ 50 ಹಳ್ಳಿಗಳಲ್ಲಿ ಸರಿಸುಮಾರು ಐವತ್ತು ಸಾವಿರ ಪ್ರತ್ಯಕ್ಷ, ಅಪ್ರತ್ಯಕ್ಷ ಸಸಿಗಳನ್ನು ವಿತರಿಸಿದ ಲವಾಗಿ ಇಂದು ಜಿಲ್ಲೆಯ 25 ಸಾವಿರ ಎಕರೆಯಷ್ಟು ಕ್ಷೇತ್ರದಲ್ಲಿ ದ್ರಾ ಬೆಳೆ ಬೆಳೆಯಲಾಗುತ್ತಿದೆ ಎಂದರು.

ಮೇಘಾಲಯದ ರಾಜ್ಯಪಾಲ ಸಿ.ಎಚ್​. ವಿಜಯಶಂಕರ ಅವರನ್ನು ಒಣದ್ರಾಯಿಂದ ತುಲಾಭಾರ ಮಾಡಲಾಯಿತು. ಸಿಎಫ್​ಸಿ ನಿರ್ದೆಶಕರಾದ ಸಂಜಯ ಪಾಟೀಲ , ಮಂಜುನಾಥ ಪಾಟೀಲ, ಶಿವಾನಂದ ಶಿಂಗಡಗಾಂವ, ದುಡ್ಡಪ್ಪ ಕುಮಟಿ, ಹಾಗೂ ಆಡಳಿತ ವರ್ಗದ ಗಜಾನನ ಶಿಂಗಡಗಾಂವ, ರಾಜಶೇಖರ ಮೈಲ್​, ಸುರೇಶ ಬಿರಾದಾರ, ಹಾಗೂ ಸಿಎಫ್​ಸಿಯ ಸದಸ್ಯರಾದ ಚಂದ್ರಕಾಂತ ಮಾಳಿ, ಈರಣ್ಣ ಬಿರಾದಾರ ಮುಂತಾದವರು ಪುಷ್ಪನಮನ ಸಲ್ಲಿಸಿದರು.

ಬೊಮ್ಮನಹಳ್ಳಿ ಗವಿಮಠದ ಗುರುಶಾಂತ ಶಿವಾಚಾರ್ಯರು ಆಶೀರ್ವಚನ ನೀಡಿದರು. ಸಂಸದ ರಮೇಶ ಜಿಗಜಣಗಿ, ದೆಹಲಿಯ ನಿಕಟಪೂರ್ವ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲರು ಮಾತನಾಡಿದರು.

ಮಹಾರಾಷ್ಟ್ರದ ಎಪಿ ಗ್ರೂಪ್​ನ ಅನೀಲಕುಮಾರ ಪಟೇಲ, ಸಾಂಗ್ಲಿಯ ನಂದಿಕೃಷ್ಣ ಕಾರ್ಪೂರೇಷನ್​ನ ಅಮೀತ ಪಟೇಲ, ವಿಜಯಪುರದ ಅಗ್ರಿಟೆಕ್​ನ ನಿರ್ಮಲ ರುಣವಾಲ, ರೈತ ಧುರೀಣ ಪಂಚಪ್ಪ ಕಲಬುರ್ಗಿ, ರಾಜೇಶ್ವರಿ ಯರನಾಳ, ಹಿರೇರೂಗಿಯ ಜಟ್ಟಿಂಗರಾಯ, ಅರಕೇರಿಯ ಅಮೋಸಿದ್ದ, ಮಖಣಾಪುರದ ಸೋಮೇಶ್ವರ, ತಿಡಗುಂದಿಯ ಕೂಡಲಸಂಗಮ ಆಶ್ರಮದ ಪೂಜಾರಿಗಳಿಗೆ ರಾಜ್ಯಪಾಲರು ಸನ್ಮಾನಿಸಿದರು. ವಿಠ್ಠಲಗೌಡ ಬಿರಾದಾರ ಅವರ ಸಾಧನೆಯನ್ನು ಗುರುತಿಸಿ ರಾಜ್ಯಪಾಲರು ಅಭಿನಂದನಾಪತ್ರ ಹಾಗೂ ಮೇಲಯ ರಾಜ್ಯಭವನದ ಸಾಧಕ ಪ್ರಶಸ್ತಿ ನೀಡಿ ಗೌರವಿಸಿದರು.

ಸಿಎ್​ಸಿಯ ಸದಸ್ಯರು, ಕರ್ನಾಟಕ, ಮಹಾರಾಷ್ಟ್ರದ ಎಂಎಸ್​ಎಂಇ ಉದ್ದಿಮೆದಾರರು, ದ್ರಾ ಬೆಳೆಗಾರರು, ರೈತರು ಉಪಸ್ಥಿತರಿದ್ದರು.