ಜಿಲ್ಲೆ

ವಿದ್ಯಾ ವಿಕಾಸಕ್ಕೆ ಸದಾ ಕೈ ಜೋಡಿಸಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಸರ್ಕಾರದ ನೀತಿಯಂತೆ 60 ವರ್ಷಕ್ಕೆ ವಯೋ ನಿವೃತ್ತಿ ಹೊಂದಿದರೂ ಇಲಾಖೆಯ ಎಲ್ಲ ಅಧಿಕಾರಿಗಳು ಹಾಗೂ ನೌಕರರು ವಿದ್ಯಾ ವಿಕಾಸದ ಪವಿತ್ರ ಕೆಲಸಕ್ಕೆ ನಿರಂತರ ಕೈ ಜೋಡಿಸಬೇಕು ಎಂದು ಶಾಲಾ ಶಿಣ ಇಲಾಖೆ ಬೆಳಗಾವಿ ವಲಯದ ಹೆಚ್ಚುವರಿ ಆಯುಕ್ತೆ ಜಯಶ್ರೀ ಶಿಂತ್ರಿ ಹೇಳಿದರು.
ನಗರದ ಡಯಟ್​ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಹಿರಿಯ ಸಹಾಯಕ ನಿರ್ದೇಶಕಿ ಪಾರ್ವತಿ ವಸ್ತ್ರದ ಹಾಗೂ ನೌಕರ ಅಶೋಕ ಶಿರಗಾವಿ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ತರಗತಿಗಳಲ್ಲಿ ಶ್ರೇಷ್ಠ ಗುಣಮಟ್ಟದ ಪರಣಾಮಕಾರಿ ಬೋಧನೆ ರೂಪಿಸುವುದೇ ಇಲಾಖೆಯ ಮೂಲ ಗುರಿ. ಎಲ್ಲ ಹಂತಗಳ ನಿವೃತ್ತ ಅಧಿಕಾರಿಗಳು ತಮ್ಮ ಅನುಭವಗಳನ್ನು ಇಲಾಖೆಯೊಂದಿಗೆ ಸದಾ ಹಂಚಿಕೊಳ್ಳಬೇಕು ಎಂದರು.
ಪಾರ್ವತಿ ವಸ್ತ್ರದ ಮಾತನಾಡಿ, ಪದವಿಪೂರ್ವ ಕಾಲೇಜುಗಳಲ್ಲಿ ಬೋಧನೆ ಮಾಡುವುದರೊಂದಿಗೆ ಆರಂಭಗೊಂಡ ನನ್ನ ಸೇವೆ ಪ್ರಸ್ತುತ ಶಿಣಾಧಿಕಾರಿ ಹಂತದವರೆಗೆ ನಡೆದು ಬಂದಿದ್ದು, ಎಲ್ಲ ನೆಲೆಗಳ ಪಾರದರ್ಶಕ ಸರ್ಕಾರಿ ಸೇವೆಯು ತೃಪ್ತಿ ತಂದಿದೆ ಎಂದರು.
ಶಾಲಾ ಶಿಣ ಇಲಾಖೆ ಜಂಟಿ ನಿರ್ದೇಶಕ ಈಶ್ವರ ನಾಯಕ, ಆಡಳಿತ ಉಪನಿರ್ದೇಶಕ ಎಸ್​.ಬಿ. ಬಿಂಗೇರಿ, ದೈಹಿಕ ಶಿಣ ಉಪನಿರ್ದೇಶಕಿ ಮಂಗಳಾ ನಾಯಕ, ಡಾ. ಲಿಂಗರಾಜ ಅಂಗಡಿ, ಸಂಗಮೇಶ ಚಲವಾದಿ, ಎ.ಎಸ್​.ಪಾಟೀಲ, ಸುಜಾತಾ ತಿಮ್ಮಾಪುರ, ಬಿ.ವೈ. ಭಜಂತ್ರಿ, ಪಿ.ಆರ್​. ಬಾರಕೇರ, ಸಂಜೀವಸಿಂಗ್​, ಪ್ರಕಾಶ ಹೊಸಮನಿ, ಶಾಮಲಾ ನಾಗರಾಜ, ಇತರರು ಇದ್ದರು.