ಮುಗಳಿಹಾಳ: ಈ ಭಾಗದ ಜನರ ಪ್ರೀತಿ ವಿಶ್ವಾಸ ಅಪಾರ. ಜನರು ಆಧ್ಯಾತ್ಮಿಕ ಮನೋಭಾವ ಹೊಂದಿ ಮುನ್ನಡೆಯುತ್ತಿದ್ದು, ಮೆಳ್ಳಿಕೇರಿ ಗ್ರಾಮದ ಅಭಿವೃದ್ಧಿಗೆ ಸದಾ ಬದ್ಧ ಎಂದು ಶಾಸಕ ವಿಶ್ವಾಸ ವೆದ್ಯ ಹೇಳಿದರು. ಸಮೀಪದ ಮೆಳ್ಳಿಕೇರಿ ಗ್ರಾಮದಲ್ಲಿ ಮಾರುತೇಶ್ವರ ಓಕುಳಿ ಮತ್ತು ಲಕ್ಷಿ$್ಮದೇವಿ ಉಡಿ ತುಂಬುವ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿ, ಗ್ರಾಮಕ್ಕೆ ರಂಗಮಂದಿರ ನಿರ್ಮಾಣ, ಬಸವೇಶ್ವರ ದೇವಸ್ಥಾನ ಅಭಿವದ್ಧಿ, ರಸ್ತೆಗಳ ಅಭಿವದ್ಧಿ ಕಾರ್ಯ ಶ್ರೀವಾಗಿ ಮಾಡುತ್ತೇನೆ ಎಂದರು.
ಶಾಸಕರನ್ನು ಅದ್ದೂರಿಯಾಗಿ ತೆರೆದ ವಾಹನದಲ್ಲಿ ಪುಷ್ಪಾರ್ಚನೆ ಮೂಲಕ ಮುತೆದೆಯರು ಆರತಿ ಬೆಳಗಿ ಬರಮಾಡಿಕೊಂಡರು. ಮುಖಂಡರಾದ ಪ್ರಕಾಶ ವಾಲಿ, ಬೆಮುಲ್ ನಿರ್ದೇಶಕ ಶಂಕರ ಇಟ್ನಾಳ, ಆರ್.ಕೆ.ಪಟಾತ್, ಪಡೆಪ್ಪ ನರಿ, ಎಪಿಎಂಸಿ ಅಧ್ಯ ನೀಲಕಂಠ ಶಿದ್ದಬಸನ್ನವರ, ದುರ್ಗಪ್ಪ ದಳವಾಯಿ, ನಾಗರಾಜ ದೇಸಾಯಿ, ಮಹಾದೇವ ದೇಸಾಯಿ, ಗೋಪಾಲ ದಳವಾಯಿ, ಬಸವರಾಜ ಕುರಬೇಟ, ಯಲ್ಲಪ್ಪ ಬಾವಿಕಟ್ಟಿ, ಕರೆಪ್ಪ ಬಾಚಗೌಡ್ರ, ಯರಗಟ್ಟಿ ತಾಲೂಕು ಯೂತ್ ಕಾಂಗ್ರೆಸ್ ಉಪಾಧ್ಯ ಮುತ್ತು ದಳವಾಯಿ, ವಿಠ್ಠಲ ತೋರಣಗಟ್ಟಿ ಇತರರಿದ್ದರು.