ಜಿಲ್ಲೆ

ಮೂಡುಬಿದಿರೆಯಲ್ಲಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಅಂತಾರಾಷ್ಟ್ರೀಯ ಉತ್ಸವ: ಡಾ. ಮೋಹನ್ ಆಳ್ವಾ

ಗೋಪಾಲಕೃಷ್ಣ ಪಾದೂರ್

ಉಡುಪಿ: ಮೂಡುಬಿದಿರೆಯಲ್ಲಿ ಡಿ.21ರಿಂದ 27ರವರೆಗೆ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಅಂತಾರಾಷ್ಟ್ರೀಯ ಜಾಂಬೂರಿ ಆಯೋಜಿಸಲಾಗಿದ್ದು, ದೇಶ-ವಿದೇಶಗಳಿಂದ ಸುಮಾರು 50 ಸಾವಿರ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಮೋಹನ್ ಆಳ್ವಾ ತಿಳಿಸಿದ್ದಾರೆ.

ಭಾನುವಾರ ಕುಂಜಿಬೆಟ್ಟುವಿನಲ್ಲಿ ಚಿತ್ರ ಕಲಾವಿದ ಪಿ. ಎನ್. ಆಚಾರ್ಯರ ಸಮಗ್ರ ಕಲಾಕೃತಿಗಳ ಸಂಪುಟ ‘ಕಲಾಸಿರಿ’ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಉತ್ಸವದಲ್ಲಿ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿ ಮತ್ತು ಕಲೆಗಳ ಬಗ್ಗೆ ಅರಿವು ಮೂಡಿಸಲು ಸಾಂಸ್ಕೃತಿಕ ಮೇಳ, ಕಲಾಮೇಳಗಳ ಜೊತೆಗೆ ಕೃಷಿ ಮೇಳ, ವಿಜ್ಞಾನ ಮೇಳ, ಪುಸ್ತಕ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಈ ವರ್ಷದಿಂದ ಮತ್ತೆ ಆಳ್ವಾಸ್ ನುಡಿಸಿರಿ ಪ್ರಾರಂಭವಾಗಲಿದ್ದು, ಡಿ.16 ರಿಂದ 18ರವರೆಗೆ ನಡೆಯಲಿದೆ. ಈಗಾಗಲೇ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಪಿ. ಎನ್. ಆಚಾರ್ಯ ಅಭಿಮಾನಿ ಬಳಗ ಆಧ್ಯಕ್ಷ ಯೋಗೀಶ್ ಆಚಾರ್ಯ ಅಲೆವೂರು ಅಧ್ಯಕ್ಷತೆ ವಹಿಸಿದ್ದರು. ಕಲಾವಿಮರ್ಶಕ ಡಾ. ಉಪಾಧ್ಯಾಯ ಮೂಡುಬೆಳ್ಳೆ ಕೃತಿ ಪರಿಚಯಿಸಿದರು. ನಿಟ್ಟೆ ವಿವಿ ಎ.ಸಿ. ಇನ್ಕೂೃಬೇಶನ್ ಸೆಂಟರ್ ಸಿಇಒ ಡಾ. ಎ.ಪಿ ಆಚಾರ್ಯ, ಚಿತ್ರಕಲಾ ಚಾವಡಿ ಅಧ್ಯಕ್ಷ ಗಣೇಶ್ ಆಚಾರ್ಯ, ಚಿತ್ರ ಕಲಾವಿದ ಪಿ. ಎನ್. ಆಚಾರ್ಯ ಉಪಸ್ಥಿತರಿದ್ದರು. ಎಸ್.ಪಿ. ಗುರುದಾಸ್ ಪ್ರಸ್ತಾವನೆಗೈದರು. ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು. ಕೆ.ಮುರಳೀಧರ ವಂದಿಸಿದರು.