ಜಿಲ್ಲೆ

ಆಳ್ವಾ ಫಾರ್ಮಸಿ ಫ್ಯಾಕ್ಟರಿ ಔಟ್ ಲೇಟ್ ಉದ್ಘಾಟನೆ: ವೆಬ್‌ಸೈಟ್, ಟಿವಿಸಿ ಬಿಡುಗಡೆ ಸಮಾರಂಭ

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಆಳ್ವಾಸ್ ಫಾರ್ಮಸಿಯು 1982ರಲ್ಲಿ ಆರಂಭಗೊಂಡಿದ್ದು, ಆಯುರ್ವೇದ ಔಷಧ, ಇತರ ಆಯುಷ್ ಉತ್ಪನ್ನ ನಿರಂತರವಾಗಿ ವಿಕಸನಗೊಳ್ಳುತ್ತಿರುವ ಉತ್ಪಾದಕರಾಗಿ ಅಭಿವೃದ್ಧಿಗೊಂಡಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.

ಮಿಜಾರಿನ ಆಳ್ವಾ ಫಾರ್ಮಸಿಯಲ್ಲಿ ಸೋಮವಾರ ವಿವಿಧ ಔಷಧೀಯ ಉತ್ಪನ್ನಗಳ ಫ್ಯಾಕ್ಟರಿ ಔಟ್‌ಲೆಟ್, ವೆಬ್‌ಸೈಟ್ ಬಿಡುಗಡೆ, ಟಿವಿಸಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಆಳ್ವಾಸ್ ಫಾರ್ಮಸಿಯ ನೂತನ ಉತ್ಪನ್ನ ಸುಕೇಶ್ ಪೋಷಕ ತೈಲ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಪೂರಕವಾಗಿದೆ. ಇನ್ನಿತರ ಔಷಧೀಯ ಉತ್ಪನ್ನಗಳನ್ನು ಉತ್ತಮ ರೀತಿಯಲ್ಲಿ ಮಾರುಕಟ್ಟೆ ಮಾಡಿ, ಅಂತಾರಾಷ್ಟ್ರೀಯ ಮಟ್ಟದವರೆಗೆ ತಲುಪುವಂತಾಗಬೇಕು ಎಂದರು.

ಆಳ್ವಾ ಫಾರ್ಮಸಿಯ ಹೆಚ್ಚಿನ ಉತ್ಪನ್ನಗಳು ಅಮೆಜಾನ್ ಹಾಗೂ ಸ್ಪಾರ್ ಹೈಪರ್ ಮಾರ್ಕೆಟ್‌ನಲ್ಲಿ ಲಭ್ಯವಿದೆ. ಆಳ್ವ ಾರ್ಮಸಿಯ ವೆಬ್‌ಸೈಟ್‌ನಲ್ಲಿ ಎಲ್ಲ ಉತ್ಪನ್ನಗಳು ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ ಎಂದು ತಿಳಿಸಿದರು.

ರಾಜೀವ್ ಗಾಂಧಿ ವಿಜ್ಞಾನ ವಿವಿಗಳ ವಿಶ್ರಾಂತ ಕುಲಪತಿ ಡಾ.ಎಸ್.ರಮಾನಂದ ಶೆಟ್ಟಿ, ಉದ್ಯಮಿ ಶ್ರೀಪತಿ ಭಟ್, ಉದ್ಯಮಿ ಕಿಶೋರ್ ಶೆಟ್ಟಿ, ಗ್ರೀಷ್ಮಾ ಆಳ್ವ, ಹನಾ ಆಳ್ವ ಉಪಸ್ಥಿತರಿದ್ದರು. ಆಳ್ವಾಸ್ ಕಿರಿಯ ಪ್ರಾಥಮಿಕ ಶಾಲೆ ಆಡಳಿತಾಧಿಕಾರಿ ನಿತೇಶ್ ಕುಮಾರ್ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು.