ಜಿಲ್ಲೆ

ಆಲೂರು ವೆಂಕಟರಾವ ಜನ್ಮದಿನಾಚರಣೆ ನಾಳೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್​ ವತಿಯಿಂದ ಸುವರ್ಣ ಕರ್ನಾಟಕ 50ರ ಸಂಭ್ರಮಾಚರಣೆ ಮತ್ತು ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ 144ನೇ ಜನ್ಮ ದಿನವನ್ನು ಜು. 12ರಂದು ಬೆಳಗ್ಗೆ 10.30ಕ್ಕೆ ಇಲ್ಲಿನ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದೆ.
ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತೆ ಜಯಶ್ರೀ ಶಿಂತ್ರಿ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಟ್ರಸ್ಟ್​ ಅಧ್ಯಕ್ಷ ಡಾ. ಪ್ರಮೋದ ಗಾಯಿ ಅಧ್ಯಕ್ಪತೆ ವಹಿಸುವರು. ಪತ್ರಿಕಾ ರಂಗಕ್ಕೆ ಆಲೂರು ವೆಂಕಟರಾವ ಕೊಡುಗೆ ಮತ್ತು ಪತ್ರಿಕಾ ರಂಗದಲ್ಲಿ ಭಾಷಾ ಬಳಕೆ ಕುರಿತು ಹಿರಿಯ ಪತ್ರಕರ್ತ ಮನೋಜಗೌಡ ಪಾಟೀಲ ವಿಶೇಷ ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.