ಆಲೂರು: ಬದುಕನ್ನು ಹೋರಾಟದ ಹಾದಿಯ ಮೂಲಕ ಕಟ್ಟಿಕೊಂಡ ಡಾ. ಅಂಬೇಡ್ಕರ್ ಅವರು ಸರ್ವ ಜನಾಂಗಕ್ಕೂ ಸ್ಫೂರ್ತಿ ಎಂದು ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಡಿ. ವಾಸುದೇವ ಹೇಳಿದರು. ಪಟ್ಟಣದ ಪಿ.ಎಲ್.ಡಿ ಬ್ಯಾಂಕ್‌ನಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದರು. ಅಂಬೇಡ್ಕರ್ ನವ ಭಾರತ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಅವರ ತತ್ವಾದರ್ಶ, ಚಿಂತನೆ, ಹೋರಾಟದ ಹಾದಿಯನ್ನು ಇಂದಿನ ಯುವಪೀಳಿಗೆ ಅರಿಯುವಂತಾಗಬೇಕು ಎಂದರು.
ಪಿ.ಎಲ್.ಡಿ ಬ್ಯಾಂಕ್ ನ ನಿರ್ದೇಶಕ ಶಾಂತ ಕೃಷ್ಣ ವ್ಯವಸ್ಥಾಪಕ ಯಲಪ್ಪ, ನಿರ್ದೇಶಕರ ರಂಗಯ್ಯ ಅಜ್ಜೇನಹಳ್ಳಿ, ಸಿಬ್ಬಂದಿ ಕುಮಾರ್ ನಿವೃತ್ತ ಶಿಕ್ಷಕ ಹರೀಂದ್ರ ಇತರರು ಹಾಜರಿದ್ದರು.