ಜಿಲ್ಲೆ

ರೈಲು ನಿಲುಗಡೆ ಸಾಧ್ಯವಾಗುವ ಸಾಧ್ಯತೆ ಇದೆ

ಎ. ಆರ್. ರಘುರಾಮ
ಆಲೂರು : ಕೇಂದ್ರ ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ರವರ ಹುಟ್ಟುಹಬ್ಬದ ನಿಮಿತ್ತ ಆಲೂರು ತಾಲೂಕಿನ ರಾಧಮ್ಮ ಜನಸ್ಪಂದನ ಸಂಸ್ಥೆಯ ಅಧ್ಯಕ್ಷ ಮಂತ್ ಕುಮಾರ್ ನವದೆಹಲಿಯ ನಿವಾಸಕ್ಕೆ ಭೇಟಿ ನೀಡಿ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಆಲೂರು ತಾಲೂಕಿನ ರೈಲು ನಿಲುಗಡೆ ಆದೇಶವನ್ನು ರದ್ದುಗೊಳಿಸಿರುವ ಕುರಿತು ವಿಷಾದ ವ್ಯಕ್ತಪಡಿಸಿ, ಸಚಿವರ ಗಮನ ಸೆಳೆದು, ಆಲೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಸರಿಯಾದ ಸದ್ಬಳಕೆ ಮಾಡುತ್ತಿಲ್ಲ. ಟಿಕೆಟ್ ಹಣ ಸಂಗ್ರಹವು ಸಮರ್ಪಕವಿಲ್ಲ ಎಂದು ತಿಳಿಸಿ, ಆಲೂರು ರೈಲು ನಿಲ್ದಾಣದ ಅಂಕಿ-ಅಂಶಗಳ ಆಧಾರಿತ ವಿವರಗಳನ್ನು ನೀಡಿದಾಗ, ಕ್ಷೇತ್ರದ ಜನಪ್ರತಿನಿಧಿಗಳು ಸೂಕ್ತ ಮಾಹಿತಿ ನೀಡದಿರುವ ಕಾರಣ ಈ ಹಂತ ಬಂದಿರುವುದಾಗಿ ವಿಷಾದ ವ್ಯಕ್ತಪಡಿಸಿದರು. ದೇಶದ ಇತರ ರಾಜ್ಯಗಳಲ್ಲಿ ಆದಾಯ ಕಡಿಮೆಯಿದ್ದರೂ ಶಾಶ್ವತ ನಿಲುಗಡೆ ನೀಡಿರುವ ಉದಾಹರಣೆಗಳಿವೆ. ಆಲೂರಿಗೂ ಸಹ ಮತ್ತೊಮ್ಮೆ ಮಾನವೀಯ ನೆಲೆಯಲ್ಲಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಸಚಿವರು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ಪರಿಶೀಲನೆ ನಡೆುತ್ತೇನೆ. ಪ್ರಸ್ತುತ ಸುಬ್ರಹ್ಮಣ್ಯ ಮಾರ್ಗದಲ್ಲಿ ನಡೆಯುತ್ತಿರುವ ವಿದ್ಯುತ್ ಕಾಮಗಾರಿಯಿಂದ ಬೆಳಿಗ್ಗೆ ರೈಲು ಸಂಚಾರ ಸಾಧ್ಯವಿಲ್ಲದೆ, ಈ ವರ್ಷದ ನವೆಂಬರ್ ತಿಂಗಳ ಕೊನೆಯವರೆಗೆ ಕಾಯಬೇಕಾಗುತ್ತದೆ ಎಂಬ ಮಾಹಿತಿ ನೀಡಿದ ಅವರು, ಈ ವರ್ಷದ ಅಂತ್ಯದೊಳಗೆ ಆಲೂರು ತಾಲೂಕಿನ ರೈಲು ನಿಲುಗಡೆ ಪುನಃ ಸಾಧ್ಯವಾಗುವ ಸಾಧ್ಯತೆ ಇದೆ ಎಂಬ ಭರವಸೆ ನೀಡಿದರು,