ಮಂಗಳೂರು : ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಸಹಯೋಗ ಕೋಶದ ವತಿಯಿಂದ ‘ಶಿಕ್ಷಣ ವ್ಯಾಪಾರ ಮಿಷನ್- ಅಂತಾರಾಷ್ಟ್ರೀಯ ಅಧ್ಯಯನಗಳಿಗೆ ಅವಕಾಶಗಳು ಮತ್ತು ಬೆಂಬಲ’ ಕಾರ್ಯಕ್ರಮ ನಡೆಯಿತು. ಅಮೆರಿಕದ 17 ಪ್ರತಿಷ್ಠಿತ ವಿ.ವಿ.ಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ್ರು.
ಸ್ಯಾನ್ ಡಿಯಾಗೊ ವಿ.ವಿ.ಯ, ಸಿಟಿ ಯುನಿವರ್ಸಿಟಿ ಆಫ್ ಸಿಯಾಟಲ್,ಸ್ಟೇಟ್ ಯುನಿವರ್ಸಿಟಿ ಆಫ್ ನ್ಯೂಯಾರ್ಕ್, ಬ್ರಿಜಿಡ್ ಕೆನ್ನೆಸಾ ಸ್ಟೇಟ್ಯೂನಿವರ್ಸಿಟಿ, ಕ್ಯಾಥೋಲಿಕ್ ಯುನಿವರ್ಸಿಟಿ ಆಫ್ ಅಮೇರಿಕಾ , ಅರ್ಕಾನ್ಸಾಸ್ ವಿಶ್ವವಿದ್ಯಾಲಯ, ಪೆನ್ಸಿಲ್ವೇನಿಯಾ ಕಾಲೇಜ್ ಆಫ್
ಟೆಕ್ನಾಲಜಿ, ಮೇರಿಮೌಂಟ್ ವಿಶ್ವವಿದ್ಯಾಲಯ, ಸೇಂಟ್ ಲೂಯಿಸ್ ವಿಶ್ವವಿದ್ಯಾಲಯ ಮುಂತಾದ ವಿ.ವಿ.ಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಪ್ರತಿನಿಧಿಗಳು 300ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಉನ್ನತ ಶಿಕ್ಷಣದ ನಿರೀಕ್ಷೆಗಳ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸಿದರು ಪ್ರಾಧ್ಯಾಪಕಿ ಡಾ.ರೆನಿಟಾ ಡಿಸೋಜಾ ಸಂವಾದ ನೆರವೇರಿಸಿದರು.
ಅಭಿವೃದ್ಧಿ ಕೋಶದ ಡೀನ್ ಡಾ. ಮೆಲ್ವಿನ್ ಡಿಕುನ್ಹಾ ಅವರು ಸಂಸ್ಥೆಯ ಪರಂಪರೆ, ಮೂಲಸೌಕರ್ಯಗಳ ಸಾಮರ್ಥ್ಯ ಮತ್ತು ಡೀಮ್ಡ್ ವಿಶ್ವವಿದ್ಯಾಲಯದ ಸ್ಥಾನಮಾನಕ್ಕೆ ಪರಿವರ್ತನೆಯ ಪ್ರಯಾಣದ ಕುರಿತು ವಿವರಿಸಿದರು.