ಜಿಲ್ಲೆ

ಶ್ರೇಷ್ಠ ಅಲೋಶಿಯನ್ ಹಳೆ ವಿದ್ಯಾರ್ಥಿ ಪ್ರಶಸ್ತಿ -2025

Mangaluru - Hariprasad Rai

ಮಂಗಳೂರು : ನಗರದ ಸಂತ ಅಲೋಶಿಯಸ್ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಂಸ್ಥೆಯ ಹಳೇ ವಿದ್ಯಾರ್ಥಿಗಳಿಗೆ ಶ್ರೇಷ್ಠ ಅಲೋಶಿಯನ್ ಹಳೆ ವಿದ್ಯಾರ್ಥಿ ಪ್ರಶಸ್ತಿ -2025 ನೀಡಿ ಗೌರವಿಸಲಾಯಿತು.
ಮುಂಬೈಯ ಉದ್ಯಮಿ ಕನ್ಯಾಡಿ ಸದಾಶಿವ ಶೆಟ್ಟಿ, ವರ್ಷದ ಸಿಐಓ ಪ್ರಶಸ್ತಿ ಪುರಸ್ಕೃತೆ ಲೂಸಿ ಮರಿಯಪ್ಪ, ಖ್ಯಾತ ಸಂಗೀತ ನಿರ್ದೇಶಕ ಡಾ. ಗುರುಕಿರಣ್ ಶೆಟ್ಟಿ , ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ವಾಸ್ತುಶಿಲ್ಪಿ ಡಾ. ಆಸ್ಕರ್ ಜಿ. ಕಾನ್ಸೆಸಾವೊ ಮತ್ತು ಉದ್ಯಮಿ ಜೇಮ್ಸ್ ವಿನ್ಸೆಂಟ್ ಮೆಂಡೋನ್ಸಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪ್ರವೀಣ್ ಮಾರ್ಟಿಸ್ ಮಾತನಾಡಿ ‘ ಐವರು ಅಸಾಧಾರಣ ಸಾಧಕರನ್ನು ಅವರ ಸ್ಪೂರ್ತಿದಾಯಕ ಕೆಲಸಕ್ಕಾಗಿ ಗೌರವಿಸಲಾಗಿದೆ. ಸಾಧಕರು ಸಮಾಜಕ್ಕೆ ನೀಡಿದ ಅನುಕರಣೀಯ ಕೊಡುಗೆ ಶ್ಲಾಘನೀಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೆಕ್ಟರ್ ಫಾ. ಮೆಲ್ವಿನ್ ಪಿಂಟೊ ಮಾತನಾಡಿ ‘ ಸಾಧಕರು ಪರಿಶ್ರಮ ಮತ್ತು ಸಮರ್ಪಣೆಯಿಂದ ಸವಾಲುಗಳನ್ನು ಜಯಿಸಿದ್ದಾರೆ’ ಎಂದರು.
ಕಾರ್ಯಕ್ರಮ ಸಂಚಾಲಕ ಎನ್.ಜಿ. ಮೋಹನ್ ಸ್ವಾಗತಿಸಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ವಂದಿಸಿದರು. ಅಧ್ಯಾಪಕಿ ರೆನಿತಾ ಅರಾನ್ಹಾ ಕಾರ್ಯಕ್ರಮ ನಿರೂಪಿಸಿದರು.