Along with personal hygiene, keep the environment clean. 
ಜಿಲ್ಲೆ

ವೈಯಕ್ತಿಕ ಸುಚಿತ್ವದ ಜತೆಗೆ ಪರಿಸರ ಸ್ವಚ್ಛವಾಗಿಡಿ

ಹುನಗುಂದ: ಪ್ರತಿಯೊಬ್ಬರು ತಮ್ಮ ವೈಯಕ್ತಿಕ ಸುಚಿತ್ವದ ಜತೆಗೆ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಅತ್ಯವಶ್ಯವಾಗಿದೆ ಎಂದು ಕ್ಷೇತ್ರಸಮನ್ವಯಾಧಿಕಾರಿ ಸದಾಶಿವ ಗುಡಗುಂಟಿ ಹೇಳಿದರು.

ತಾಲೂಕಿನ ಅಮರಾವತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರವಾರ ಆಯೊಜಿಸಿದ್ದ ಪಿಎಂಶ್ರೀ ಅಡಿ ಸ್ವಚ್ಛತಾ ಪಖ್ವಾಡಾ ಕಾರ್ಯಾಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸ್ವಚ್ಛ ಭಾರತವನ್ನು ಕಟ್ಟುವುದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಕನಸಾಗಿತ್ತು. ಶುಚಿತ್ವವು ಸ್ವಾತಂತ್ರ್ಯಕ್ಕಿಂತಲೂ ಮಹತ್ವದ್ದು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಇಚ್ಛಾಶಕ್ತಿಯ ಮೇರೆಗೆ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮವು ಜಾರಿಗೆ ಬಂದಿದೆ ಎಂದರು.

ಪಿಎಂಶ್ರೀ ನೋಡಲ್ ಅಧಿಕಾರಿ ವಿನೋದ ಭೋವಿ ಮಾತನಾಡಿ, ಎಲ್ಲರೂ ಸ್ವಚ್ಛತೆಯ ಕಡೆಗೆ ಗಮನಹರಿಸಬೇಕೆಂದು ತಿಳಿಸಿದರು. ಬಸವರಾಜ ಹುನಕುಂಟಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಶಿಕ್ಷಕ ಸಂಗಣ್ಣ ಹಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮಣ ಲಮಾಣಿ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಸಂಗಯ್ಯ ಹಿರೇಮಠ, ಗದ್ದೆಪ್ಪ ದಾಸರ, ಲಾಲಸಾಬ್ ನದ್ಾ ಉಪಸ್ಥಿತರಿದ್ದರು. ಶಿಕ್ಷಕ ಎಸ್. ಎಸ್.ಚಿತ್ತವಾಡಗಿ ಕಾರ್ಯಕ್ರಮ ನಿರೂಪಿಸಿದರು. ಸಂಗನಗೌಡ ಪಾಟೀಲ ಸ್ವಾಗತಿಸಿದರು. ಎಸ್.ಎಚ್. ಮುಕ್ಕಣ್ಣವರ ವಂದಿಸಿದರು.