Along with education, let art be encouraged,ಮೂಡಲಗಿ: ಕಲಾವಿದರು ನಾಟಕ, ಸಾಹಿತ್ಯ ಹಾಗೂ ಚಲನಚಿತ್ರ ರಂಗದಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಅಂತಹ ಕಲಾವಿದರನ್ನು ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಕಲಾವಿದೆ ನೀಲಾ ಜೇವರ್ಗಿ ಹೇಳಿದರು.
ತಾಲೂಕಿನ ಕಲ್ಲೋಳಿಯ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜು ಹಾಗೂ ಶ್ರೀ ಎನ್.ಆರ್.ಪಾಟೀಲ ಸ್ವತಂತ್ರ ಪಪೂ ಮಹಾವಿದ್ಯಾಲಯ ಸಂಯುಕ್ತಾಶ್ರಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿವಿಧ ವೇದಿಕೆ ಕಾರ್ಯಚಟುವಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಬಸಗೌಡ ಪಾಟೀಲ ಮಾತನಾಡಿದರು.
ಪ್ರಾಚಾರ್ಯ ಡಾ.ಸುರೇಶ ಹನಗಂಡಿ, ಕಲಾವಿದ ಬಸವರಾಜ ಗುಡ್ಡಪ್ಪನವರ, ಸಂಸ್ಥೆಯ ಉಪಾಧ್ಯಕ್ಷ ಬಿ.ಆರ್.ಕಡಾಡಿ, ನಿರ್ದೇಶಕರಾದ ಬಿ.ಎಸ್.ಗೋರೋಶಿ, ಬಿ.ಬಿ.ಬೆಳಕೂಡ, ಬಿ.ಎಸ್.ಕಡಾಡಿ, ಎಸ್.ಎಂ.ಖಾನಾಪುರ, ಎಂ.ಎಸ್.ಕಪ್ಪಲಗುದ್ದಿ, ಎಂ.ಡಿ.ಕುರಬೇಟ, ಬಿ.ಕೆ.ಗೋರೋಶಿ, ಪ್ರಾಚಾರ್ಯೆ ವಿ.ಬಿ.ಪಂಡಿತ, ಎ.ಆರ್.ಪಾಟೀಲ, ರಾಜು ಉಪ್ಪಾರ, ಮೋಬಿನಾ ಶೇಖ್ ಇತರರಿದ್ದರು.