ಮೈಸೂರು: ಅಮೆರಿಕದ ಲಾಸ್‌ಎಂಜಲೀಸ್‌ನಲ್ಲಿ ಡಿ.14ರಂದು ವರ್ಲ್ಡ್ ಫೂಲ್ ಅಸೋಸಿಯೇಷನ್ ಆಯೋಜಿಸಿರುವ ಅಂತಾರಾಷ್ಟ್ರೀಯ ವಿಶೇಷ ಚೇತನರ ಸ್ನೂಕರ್ ಸ್ಪರ್ಧೆಗೆ ಸಿದ್ದಾರ್ಥ ನಗರದ ಅಲೋಕ್ ಆರ್.ಜೈನ್ ಆಯ್ಕೆಯಾಗಿದ್ದಾರೆ.
ಅಲೋಕ್ ಆರ್. ಜೈನ್ ಅವರನ್ನು ಪಾತಿ ಫೌಂಡೇಶನ್‌ನಿಂದ ನಗರದಲ್ಲಿ ಬುಧವಾರ ಸನ್ಮಾನಿಸಿ ಶುಭ ಕೋರಲಾಯಿತು. ಭಾರತವನ್ನು 7 ಜನ ಸ್ಪರ್ಧಿಸುತ್ತಿದ್ದು, ಅದರಲ್ಲಿ ಐವರು ಕರ್ನಾಟಕದವರೇ ಆಗಿದ್ದಾರೆ.
ನಗರಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೈಸೂರಿನ ಹುಡುಗ ಸ್ಪರ್ಧಿಸಿರುತ್ತಿರುವುದು ನಮ್ಮೂರಿಗೆ ಹೆಮ್ಮೆಯ ವಿಷಯ. ಇತ್ತೀಚಿನ ದಿನಗಳಲ್ಲಿ ಅಂಗವಿಕಲರು ತಮ್ಮ ನ್ಯೂನತೆ ಮೆಟ್ಟಿ ನಿಂತು, ಸಾಧನೆಗಳ ಹಾದಿಯಲ್ಲಿ ನಡೆಯುತ್ತಿರುವುದು ವೆುಚ್ಚುವ ಸಂಗತಿ ಎಂದರು.
ಯಾವುದೇ ಸಾಧನೆ ಮಾಡಲು ಮನಸ್ಸು ಗಟ್ಟಿಯಾಗಿರಬೇಕು. ಆ ನಿಟ್ಟಿನಲ್ಲಿ ಅಂಗವಿಕಲರ ಸಾಧನೆಗೆ ಪ್ರೋತ್ಸಾಹ ನೀಡಬೇಕಾಗಿದೆ. ಇವರ ಸಾಧನೆಯು ಎಲ್ಲಕ್ಕಿಂತ ಮಿಗಿಲಾದ ಸಾಧನೆಯಾಗಿದೆ ಎಂದು ಬಣ್ಣಿಸಿದರು.
ಬಿಜೆಪಿ ನಗರ ಉಪಾಧ್ಯಕ್ಷ ಜೋಗಿ ಮಂಜು, ಜೆಡಿಎಸ್ ಕಾರ್ಯದಕ್ಷ ಪ್ರಕಾಶ್ ಪ್ರಿಯದರ್ಶನ್, ಮುಖಂಡರಾದ ಎಸ್.ಎನ್.ರಾಜೇಶ್, ಆಲನಹಳ್ಳಿ ಎಂ.ಎನ್.ಚೇತನ್‌ಗೌಡ, ರವಿಚಂದ್ರ, ಸಚಿನ್ ನಾಯಕ್, ಗಗನ್‌ದೀಪ್, ಮಹಾನ್ ಶ್ರೇಯಸ್ ಇತರರು ಇದ್ದರು.