ಶಿರಸಿ: ಸ್ವರ್ಣವಲ್ಲೀ ಮಠದ ನಗರಭಾಗದ ಹವ್ಯಕ ಶಿಷ್ಯರಿಂದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಹಾಗೂ ಶ್ರಿ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಯವರ ಚಾತುರ್ಮಾಸ್ಯದ ನಿಮಿತ್ತ ಸೀಮಾಭಿಕ್ಷದ ಕಾರ್ಯಕ್ರಮ ಜು.27ರಂದು ನಡೆಯಲಿದೆ.
ಉಭಯ ಶ್ರೀಗಳ ಪಾದಪೂಜೆ, ಭಿಕ್ಷೆ, ಸುಮಂಗಲಿಯರಿಂದ ಕುಂಕುಮಾರ್ಚನೆ ಹಾಗೂ ಉಪನೀತರಿಂದ ಗಾಯತ್ರಿ ಜಪಾನುಷ್ಠಾನ ಕಾರ್ಯಕ್ರಮ ಜರುಗಲಿದ್ದು, ಬೆಳಗ್ಗೆ 10 ಗಂಟೆ ಒಳಗಾಗಿ ಹವ್ಯಕ ಶಿಷ್ಯರು ಶ್ರೀ ಮಠಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಗುರು ಸೇವೆಯಲ್ಲಿ ಭಾಗವಹಿಸಲು ಕೋರಲಾಗಿದೆ.
ಶಿರಸಿ ಯೋಗಮಂದಿರದಲ್ಲಿ ಆಗಸ್ಟ್ 8ರ ಮುಂಜಾನೆ 9.30ಕ್ಕೆ ಹವ್ಯಕ ಮಾತೆಯರಿಗೆ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿವ್ರತ ಹಾಗೂ ಆ. 9 ಬೆಳಗ್ಗೆ 8 ಗಂಟೆಯಿಂದ ಹವ್ಯಕ ಶಿಷ್ಯರಿಗೆ ಯಜ್ಞೋಪವೀತ ಧಾರಣ ಹಾಗೂ ಉಪಾಕರ್ಮ ಮಾಡಿಸಲು ಅವಕಾಶವಿದೆ. ಎಲ್ಲ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಯೋಗಮಂದಿರವು ಪ್ರಕಟಣೆ ಮೂಲಕ ವಿನಂತಿಸಿದೆ.